Home Bibles ಪ್ರಕಟನೆ 14:18 · ಕನ್ನಡ ಬೈಬಲ್
ಪ್ರಕಟನೆ 14:18 · ಕನ್ನಡ ಬೈಬಲ್

ಬೆಂಕಿಯ ಮೇಲೆ ಅಧಿಕಾರವಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು ಆ ಹದವಾದ ಕುಡುಗೋಲು ಇದ್ದವನಿಗೆ--ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೇ ಗೊಂಚಲುಗಳನ್ನು ಕೂಡಿಸು; ಯಾಕಂದರೆ ಅದರ ಹಣ್ಣುಗಳು ಪೂರಾ ಮಾಗಿವೆ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.

Cross references

ಯೋವೇಲ 3:13

ಕುಡುಗೋಲನ್ನು ಹಾಕಿರಿ, ಬೆಳೆ ಪಕ್ವವಾಯಿತು; ಬಂದು ಇಳಿಯಿರಿ; ದ್ರಾಕ್ಷೆಯ ಅಲೆ ತುಂಬಿ ಅದೆ; ತೊಟ್ಟಿಗಳು ತುಳುಕುತ್ತವೆ; ಅವರ ಕೆಟ್ಟತನವು ಬಹಳವಾಗಿದೆ.

ಪ್ರಕಟನೆ 6:9

ಆತನು ಐದನೆಯ ಮುದ್ರೆಯನ್ನು ತೆರೆದಾಗ ದೇವರವಾಕ್ಯದ ನಿಮಿತ್ತವಾಗಿಯೂ ತಾವು ಹೊಂದಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತವಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವದನ್ನು ನಾನು ಕಂಡೆನು.

ಪ್ರಕಟನೆ 14:15

ಆಗ ಮತ್ತೊಬ್ಬ ದೂತನು ಆಲಯದೊಳಗಿಂದ ಬಂದು ಮೇಘದ ಮೇಲೆ ಕೂತಿದ್ದಾತನಿಗೆ--ನಿನಗೆ ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಮಹಾಶಬ್ದದಿಂದ ಕೂಗಿದನು.

ಪ್ರಕಟನೆ 16:8

ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು.

Interlinear

Choose Theme