Home Bibles ಕೀರ್ತನೆಗಳು 81:9 · ಕನ್ನಡ ಬೈಬಲ್
ಕೀರ್ತನೆಗಳು 81:9 · ಕನ್ನಡ ಬೈಬಲ್

ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು.

Cross references

ನಿರ್ಗಮಕಾಂಡ 15:26

ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.

ನಿರ್ಗಮಕಾಂಡ 20:3

ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.

ದ್ವಿತೀಯೋಪದೇಶಕಾಂಡ 6:14

ನಿಮ್ಮ ಸುತ್ತಲಿರುವ ಜನಗಳ ದೇವರುಗಳಾದ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.

ದ್ವಿತೀಯೋಪದೇಶಕಾಂಡ 32:12

ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ.

1 ಅರಸುಗಳು 22:19

ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.

ಕೀರ್ತನೆಗಳು 44:20

ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ

ಕೀರ್ತನೆಗಳು 50:7

ಓ ನನ್ನ ಜನರೇ, ಕೇಳಿರಿ, ನಾನು ನುಡಿಯುವೆನು; ಓ ಇಸ್ರಾಯೇಲೇ, ನಿನಗೆ ವಿರೋಧವಾಗಿ ನಾನು ಸಾಕ್ಷಿಕೊಡುವೆನು; ನಾನು ದೇವರು, ಹೌದು ನಿನ್ನ ದೇವರು ನಾನೇ.

ಯೆಶಾಯ 28:23

ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ; ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.

ಯೆಶಾಯ 43:12

ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ ನಾನೇ ರಕ್ಷಣೆ ಯನ್ನು ಪ್ರಕಟಿಸಿ ತೋರಿಸಿದ್ದೇನೆ; ಆದದರಿಂದ ನೀವು ನನ್ನ ಸಾಕ್ಷಿಗಳು; ನಾನೇ ದೇವರೆಂದು ಕರ್ತನು ನುಡಿಯು ತ್ತಾನೆ.

ಹೊಶೇಯ 4:1

ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ.

ಮಲಾಕಿ 2:11

ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.

1 ಕೊರಿಂಥದವರಿಗೆ 8:5

ಆಕಾಶದಲ್ಲಿಯಾಗಲೀ ಭೂಮಿಯಲ್ಲಾಗಲೀ ದೇವರು ಗಳೆಂದು ಕರೆಯಲ್ಪಟ್ಟವುಗಳು ಇದ್ದಾಗ್ಯೂ (ಅನೇಕ ದೇವರುಗಳು ಮತ್ತು ಅನೇಕ ಪ್ರಭುಗಳು ಇರುತ್ತಾರೆ.)

Interlinear

Choose Theme