ಅವನ ಹೆಗಲಿನಿಂದ ಹೊರೆಯನ್ನು ತೊಲಗಿಸಿದನು; ಅವನ ಕೈಗಳು ಪುಟ್ಟಿಗಳಿಂದ ಬಿಡುಗಡೆ ಹೊಂದಿದವು.
Cross references
ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಯನ್ನು ಮಾಡುವ ಕೆಲಸದ ಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳ ಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವನ ವನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿ ಸಿದ ಎಲ್ಲಾ ಸೇವೆಯೂ ಕಠಿಣವಾಗಿತ್ತು.
ಆದದರಿಂದ ಇಸ್ರಾ ಯೇಲ್ ಮಕ್ಕಳಿಗೆ--ನಾನೇ ಕರ್ತನು, ನಾನು ನಿಮ್ಮನ್ನು ಐಗುಪ್ತದ ಬಿಟ್ಟೀಕೆಲಸಗಳಿಂದ ಹೊರಗೆ ಬರಮಾಡಿ ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ ನಾನು ಚಾಚಿದ ಬಾಹುವಿನಿಂದಲೂ ದೊಡ್ಡ ನ್ಯಾಯತೀರ್ಪುಗ ಳಿಂದಲೂ
ಇವರೇ ಕುಂಬಾರರು. ಇವರು ಗಿಡಗಳ ಕೆಳಗೂ ಬೇಲಿಯ ಅಂಚಿನಲ್ಲಿಯೂ ವಾಸವಾಗಿರುವವರು; ಅಲ್ಲಿ ಅವರು ಅರಸನ ಕೆಲಸ ಕ್ಕೋಸ್ಕರ ವಾಸವಾಗಿದ್ದರು.
ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ.
ಇಸ್ರಾಯೇಲನು ಐಗುಪ್ತದೊಳಗಿಂದಲೂ ಯಾಕೋಬನ ಮನೆ ತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟಾಗ
ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
ಅವನ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ಮಿದ್ಯಾ ನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀ.
ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವದು; ನೀವು ಅಭಿಷಿಕ್ತರಾದ ಕಾರಣ ನೊಗವು ನಾಶವಾಗಿ ಹೋಗುವದು.
ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.