Home Bibles ಕೀರ್ತನೆಗಳು 79:13 · ಕನ್ನಡ ಬೈಬಲ್
ಕೀರ್ತನೆಗಳು 79:13 · ಕನ್ನಡ ಬೈಬಲ್

ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.

Cross references

ಕೀರ್ತನೆಗಳು 44:8

ನಾವು ದಿನವೆಲ್ಲಾ ದೇವರಲ್ಲಿ ಹೆಚ್ಚಳ ಪಡುವೆವು; ನಿನ್ನ ಹೆಸರನ್ನು ಯುಗಯುಗಕ್ಕೂ ಕೊಂಡಾ ಡುವೆವು. ಸೆಲಾ.

ಕೀರ್ತನೆಗಳು 45:17

ತಲತಲಾಂತರಗಳ ಲ್ಲೆಲ್ಲಾ ನಿನ್ನ ಹೆಸರನ್ನು ನಾನು ಜ್ಞಾಪಕಪಡಿಸುವೆನು; ಆದದರಿಂದ ಜನರು ಯುಗಯುಗಾಂತರಗಳಿಗೂ ನಿನ್ನನ್ನು ಕೊಂಡಾಡುವರು.

ಕೀರ್ತನೆಗಳು 74:1

ಓ ದೇವರೇ, ಸದಾಕಾಲಕ್ಕೆ ತಳ್ಳಿಬಿಟ್ಟದ್ದೇಕೆ? ನಿನ್ನ ಮೇವಿನ ಕುರಿಮಂದೆಗೆ ವಿರೋಧವಾಗಿ ನಿನ್ನ ಕೋಪವು ಹೊಗೆಯಾಡುವದು ಯಾಕೆ?

ಕೀರ್ತನೆಗಳು 74:18

ಓ ಕರ್ತನೇ, ವೈರಿಯು ನಿಂದಿಸಿ ಮೂರ್ಖರು ನಿನ್ನ ನಾಮವನ್ನು ದೂಷಿಸಿದ್ದನ್ನು ಜ್ಞಾಪಿಸಿಕೋ.

ಕೀರ್ತನೆಗಳು 74:22

ಓ ದೇವರೇ, ಏಳು; ನಿನ್ನ ಸ್ವಂತ ವ್ಯಾಜ್ಯವನ್ನು ವಿವಾದಿಸು; ದಿನವೆಲ್ಲಾ ಮೂರ್ಖನು ನಿನ್ನನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪ ಕಮಾಡಿಕೋ.ನಿನ್ನ ವೈರಿಗಳ ಸ್ವರವನ್ನು ಮರೆತು ಬಿಡಬೇಡ; ನಿನ್ನ ವಿರೋಧಿಗಳ ಘೋಷವು ಯಾವಾ ಗಲೂ ಏಳುತ್ತದೆ.

ಕೀರ್ತನೆಗಳು 95:7

ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ

ಕೀರ್ತನೆಗಳು 100:3

ಕರ್ತನೇ ದೇವರೆಂದು ತಿಳುಕೊಳ್ಳಿರಿ; ನಾವಲ್ಲ, ಆತನೇ ನಮ್ಮನ್ನು ಉಂಟು ಮಾಡಿದ್ದಾನೆ; ನಾವು ಆತನ ಜನರೂ ಆತನ ಹುಲ್ಲುಗಾವಲಿನ ಮಂದೆಯೂ ಆಗಿದ್ದೇವೆ.

ಕೀರ್ತನೆಗಳು 145:4

ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.

ಯೆಶಾಯ 43:21

ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.

Interlinear

Choose Theme