ಆದರೆ ಅವರು ಇನ್ನೂ ಆತನಿಗೆ ವಿರೋಧವಾಗಿ ಪಾಪಮಾಡಿ ಅರಣ್ಯದಲ್ಲಿ ಮಹೋನ್ನತನಿಗೆ ಕೋಪ ವನ್ನೆಬ್ಬಿಸಿ
Cross references
ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು.
ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು.
ನಿನ್ನ ದ್ರೋಹವನ್ನೂ ನಿನ್ನ ಬಗ್ಗದ ಕುತ್ತಿಗೆಯನ್ನೂ ನಾನು ಬಲ್ಲೆನು; ಇಗೋ, ಈಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರು ವಾಗಲೇ ಕರ್ತನಿಗೆ ದ್ರೋಹಮಾಡಿದವರಾದಿರಿ; ನಾನು ಸತ್ತ ಮೇಲೆ ಇನ್ನೇನ್ನಾಗುವದು?
ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ.
ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.
ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು.
ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
ಕೆಲವರು ಆತನು ನುಡಿದದ್ದನ್ನು ಕೇಳಿದಾಗ ಕೋಪವ ನ್ನೆಬ್ಬಿಸಿದರು; ಆದಾಗ್ಯೂ ಮೋಶೆಯ ಮೂಲಕ ಐಗುಪ್ತದಿಂದ ಬಂದವರೆಲ್ಲರೂ ಅಲ್ಲ.