Home Bibles ಕೀರ್ತನೆಗಳು 73:12 · ಕನ್ನಡ ಬೈಬಲ್
ಕೀರ್ತನೆಗಳು 73:12 · ಕನ್ನಡ ಬೈಬಲ್

ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.

Cross references

ಕೀರ್ತನೆಗಳು 17:14

ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.

ಕೀರ್ತನೆಗಳು 37:35

ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.

ಕೀರ್ತನೆಗಳು 49:6

ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು.

ಕೀರ್ತನೆಗಳು 52:7

ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.

ಕೀರ್ತನೆಗಳು 62:10

ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.

ಯೆರೆಮಿಯ 5:17

ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ ತುತೂರಿಯ ಶಬ್ದವನ್ನು ಆಲೈ ಸಿರಿ ಅಂದೆನು; ಆದರೆ ಅವರು--ನಾವು ಆಲೈಸುವ ದಿಲ್ಲ ಅಂದರು.

ಯೆರೆಮಿಯ 5:28

ಅವರೆಲ್ಲರು ಘೋರವಾಗಿ ತಿರುಗಿ ಬೀಳುವವರೇ; ಚಾಡಿಕೋರರಾಗಿ ನಡೆಯುತ್ತಾರೆ; ಹಿತ್ತಾಳೆಯೂ ಕಬ್ಬಿಣವೂ ಆಗಿದ್ದಾರೆ; ಅವರೆಲ್ಲರೂ ಕೆಡಿಸುವವರೇ.

ಯೆರೆಮಿಯ 12:1

ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು;

ಹೊಶೇಯ 12:7

ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ.

ಲೂಕ 16:19

ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.

ಯಾಕೋಬ 5:1

ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ

Interlinear

Choose Theme