ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.
Cross references
ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.
ಇಸ್ರಾಯೇಲು ಕರ್ತನಲ್ಲಿ ನಿರೀಕ್ಷಿಸಲಿ; ಕರ್ತನ ಬಳಿಯಲ್ಲಿ ಕರುಣೆಯೂ ಆತನಲ್ಲಿ ವಿಮೋಚನೆಯೂ ಬಹಳವಾಗಿದೆ.ಆತನು ಇಸ್ರಾಯೇಲನ್ನು ಅದರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವನು.
ಇದನ್ನು ನಾನು ನನ್ನ ಮನಸ್ಸಿಗೆ ತರುತ್ತೇನೆ, ಆದದರಿಂದ ನನಗೆ ನಿರೀಕ್ಷೆ ಇದೆ.
ಕರ್ತನೇ ನನ್ನ ಪಾಲೆಂದು ನನ್ನ ಪ್ರಾಣವು ಹೇಳುತ್ತದೆ, ಆದದರಿಂದ ನಾನು ಆತನಲ್ಲಿ ನಿರೀಕ್ಷೆ ಇಡುತ್ತೇನೆ.
ಕರ್ತನು ತನಗಾಗಿ ಕಾಯುವವನಿಗೂ ಹುಡುಕುವ ಪ್ರಾಣಕ್ಕೂ ಒಳ್ಳೆಯವನಾಗಿದ್ದಾನೆ.
ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು.
ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ನೀವು ಜ್ಞಾನ ಮತ್ತು ಪೂರ್ಣ ವಿವೇಕಗಳಿಂದ ಕೂಡಿದವರಾಗಿರಬೇಕೆಂತಲೂ
ಸಮಸ್ತ ಮಕೆದೋನ್ಯ ದಲ್ಲಿರುವ ಸಹೋದರರನ್ನೆಲ್ಲಾ ಪ್ರೀತಿಸುವವರಾಗಿಯೇ ಇದ್ದೀರಿ; ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
ಆದದರಿಂದ ನಿಮ್ಮ ಭರವಸವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ನಷ್ಟ ಪರಿಹಾರದ ದೊಡ್ಡ ಪ್ರತಿಫಲ ಉಂಟು.
ಆದದರಿಂದ ನೀವು ಮನಸ್ಸಿನ ನಡುವನ್ನು ಕಟ್ಟಿ ಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷ ನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನೀರಿಕ್ಷೆಯನ್ನು ಅಂತ್ಯದವರೆಗೆ ಇಡಿರಿ.
ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆ ಇರಲಿ. ಆಮೆನ್.
ಆತನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.