ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.
Cross references
ಓ ಕರ್ತನೇ, ನೀನು ದೂರದಲ್ಲಿ ನಿಂತು ಕೊಳ್ಳುವದೂ ಕಷ್ಟಕಾಲಗಳಲ್ಲಿ ನಿನ್ನನ್ನು ಮರೆಮಾಡಿಕೊಳ್ಳುವದೂ ಯಾಕೆ?
ನನ್ನಿಂದ ದೂರವಾಗಿರಬೇಡ; ಇಕ್ಕಟ್ಟು ಸವಿಾಪ ವಾಗಿದೆ; ನನಗೆ ಸಹಾಯಕನು ಯಾರೂ ಇಲ್ಲ.
ಆದರೆ ಓ ಕರ್ತನೇ, ನೀನು ನನ್ನಿಂದ ದೂರವಾಗಿರಬೇಡ; ಓ ನನ್ನ ಬಲವೇ, ನನ್ನ ಸಹಾಯಕ್ಕೆ ತ್ವರೆಪಡು.
ಓ ಕರ್ತನೇ, ನೀನು ಇದನ್ನು ನೋಡಿದ್ದೀ; ಸುಮ್ಮನಿರಬೇಡ, ಓ ಕರ್ತನೇ, ನನಗೆ ದೂರವಾಗಿರ ಬೇಡ.
ಓ ಕರ್ತನೇ, ನನ್ನನ್ನು ಬಿಡಬೇಡ ; ನನ್ನ ದೇವರೇ, ನನಗೆ ದೂರವಾಗಿರಬೇಡ.ನನ್ನ ರಕ್ಷಣೆ ಯಾಗಿರುವ ಕರ್ತನೇ, ನನ್ನ ಸಹಾಯಕ್ಕೆ ಬೇಗ ಬಾ.
ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.
ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು.
ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.
ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ.
ಆದರೆ ನಾನು ದೀನನೂ ಬಡವನೂ ಆಗಿದ್ದೇನೆ; ಓ ದೇವರೇ ನನಗೋಸ್ಕರ ತ್ವರೆಪಡು; ನನ್ನ ಸಹಾಯವೂ ನನ್ನನ್ನು ತಪ್ಪಿಸುವವನೂ ನೀನೇ. ಓ ಕರ್ತನೇ, ತಡ ಮಾಡಬೇಡ.
ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.