ಅವನು ಕುಣಿಯನ್ನು ಅಗೆದಿದ್ದಾನೆ. ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ.
Cross references
ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
ನಾನು ಕಂಡ ಹಾಗೆ ದುಷ್ಟತನವನ್ನು ಉಳುವವರೂ ದುಷ್ಟತನವನ್ನು ಬಿತ್ತುವ ವರೂ ಅದನ್ನೇ ಕೊಯ್ಯುತ್ತಾರೆ.
ಹೌದು, ದಿಕ್ಕಿಲ್ಲದವನ ಮೇಲೆ ಬಲೆ ಹಾಕುತ್ತೀರಿ; ನಿಮ್ಮ ಸ್ನೇಹಿತನಿ ಗೋಸ್ಕರ ಕುಣಿಯನ್ನು ಅಗೆಯುತ್ತೀರಿ.
ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು.
ದುಷ್ಟರು ಗರ್ವ ದಿಂದ ದೀನನನ್ನು ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಯುಕ್ತಿಗಳಲ್ಲಿ ತಾವೇ ಹಿಡಿಯಲ್ಪಡಲಿ.
ಕಾರಣವಿಲ್ಲದೆ ಅವರು ನನಗೋಸ್ಕರ ತಮ್ಮ ಬಲೆಯನ್ನು ಕುಣಿಯಲ್ಲಿ ಅಡಗಿಸಿಟ್ಟಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣಕೋಸ್ಕರ ಅದನ್ನು ಅಗೆದಿದ್ದಾರೆ.
ಅವರು ನನ್ನ ಹೆಜ್ಜೆಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ; ನನ್ನ ಮುಂದೆ ಕುಣಿಯನ್ನು ಅಗೆದು ಅದರ ನಡುವೆ ತಾವೇ ಬಿದ್ದಿದ್ದಾರೆ. ಸೆಲಾ.
ದುಷ್ಟನಿಗಾಗಿ ಕುಣಿಯು ಅಗಿಯಲ್ಪಡುವ ವರೆಗೆ ಕಷ್ಟದ ದಿವಸಗಳಲ್ಲಿ ಅಂಥವನಿಗೆ ವಿಶ್ರಾಂತಿ ಯನ್ನು ಕೊಡುವನು.
ನಿನ್ನ ನ್ಯಾಯ ಪ್ರಮಾಣದ ಪ್ರಕಾರವಾಗಿರದ ಅಹಂಕಾರಿಗಳು ನನಗೆ ಕುಣಿಗಳನ್ನು ಅಗೆದಿದ್ದಾರೆ.
ನನ್ನ ಸುತ್ತಲಿರುವವರ ವಿಷವೂ ಅವರ ತುಟಿಗಳ ಕಾಟವೂ ಅವರನ್ನು ಮುಚ್ಚಲಿ.
ನಾನು ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿ ಬೀಳಲಿ.
ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.
ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
ಯಾವನು ಕುಣಿಯನ್ನು ಅಗೆಯುವನೋ ಅದರಲ್ಲೇ ಅವನು ಬೀಳುವನು; ಯಾವನು ಬೇಲಿಯನ್ನು ಮುರಿ ಯುವನೋ ಅವನನ್ನು ಹಾವು ಕಚ್ಚುವದು.
ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ.