Home Bibles ಕೀರ್ತನೆಗಳು 68:19 · ಕನ್ನಡ ಬೈಬಲ್
ಕೀರ್ತನೆಗಳು 68:19 · ಕನ್ನಡ ಬೈಬಲ್

ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು,ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ. ಸೆಲಾ.

Cross references

ಕೀರ್ತನೆಗಳು 32:7

ನೀನು ನನ್ನ ಮರೆಯು; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀ; ಬಿಡುಗಡೆಯ ಹಾಡುಗಳಿಂದ ನನ್ನನ್ನು ಆವರಿಸಿ ಕೊಳ್ಳುತ್ತೀ ಸೆಲಾ.

ಕೀರ್ತನೆಗಳು 55:22

ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.

ಕೀರ್ತನೆಗಳು 65:5

ನಮ್ಮ ರಕ್ಷಣೆಯ ಓ ದೇವರೇ, ಭಯಂಕರವಾದ ವುಗಳಿಂದ ನೀತಿಯಲ್ಲಿ ನೀನು ನಮಗೆ ಉತ್ತರ ಕೊಡುವಿ; ಭೂಮಿಯ ಎಲ್ಲಾ ಅಂತ್ಯಗಳಿಗೂ ಸಮುದ್ರ ದಲ್ಲಿ ದೂರವಾದವರಿಗೂ ನೀನು ಭರವಸವಾಗಿದ್ದೀ.

ಕೀರ್ತನೆಗಳು 72:17

ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.

ಕೀರ್ತನೆಗಳು 103:1

ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.

ಕೀರ್ತನೆಗಳು 139:17

ಓ ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಪ್ರಿಯವಾಗಿವೆ! ಅವುಗಳ ಸಂಖ್ಯೆ ಎಷ್ಟೋ ದೊಡ್ಡ ದಾಗಿದೆ.

ಯೆಶಾಯ 46:4

ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.

ವಿಲಾಪಗಳು 3:23

ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು; ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.

ಎಫೆಸದವರಿಗೆ 1:3

ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.

Interlinear

Choose Theme