Home Bibles ಕೀರ್ತನೆಗಳು 66:15 · ಕನ್ನಡ ಬೈಬಲ್
ಕೀರ್ತನೆಗಳು 66:15 · ಕನ್ನಡ ಬೈಬಲ್

ಕೊಬ್ಬಿದ ದಹನಬಲಿಗಳನ್ನು ಟಗರುಗಳ ಧೂಪದ ಸಂಗಡ ನಿನಗೆ ಅರ್ಪಿಸುವೆನು; ಹೋತಗಳ ಸಂಗಡ ಎತ್ತುಗಳನ್ನು ಅರ್ಪಿಸುವೆನು. ಸೆಲಾ.

Cross references

ಅಂಕೆಗಳ ಪುಸ್ತಕ 6:14

ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.

ಅಂಕೆಗಳ ಪುಸ್ತಕ 7:45

ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ.

2 ಸಮುವೇಲ 6:13

ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು.

2 ಸಮುವೇಲ 6:17

ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು.

1 ದಿನವೃತ್ತಾಂತ 16:1

ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಹಾಕಿದ ಡೇರೆಯ ಮಧ್ಯದಲ್ಲಿ ಇರಿಸಿದ ತರುವಾಯ ಅವರು ದೇವರ ಮುಂದೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.

ಎಜ್ರಾ 8:35

ಸೆರೆಯಿಂದ ಬಂದು ಸೆರೆಯಾಗಿ ಒಯ್ಯಲ್ಪಟ್ಟಿದ್ದ ಅವರ ಮಕ್ಕಳು ಇಸ್ರಾಯೇಲ್‌ ದೇವರಿಗೆ ದಹನ ಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲ್ಯರಿ ಗೋಸ್ಕರ ಹನ್ನೆರಡು ಹೋರಿಗಳನ್ನೂ ತೊಂಭತ್ತಾರು ಟಗರುಗಳನ್ನೂ ಎಪ್ಪತ್ತೇಳು ಕುರಿಮರಿಗಳನ್ನೂ ಪಾಪ ಕಳೆಯುವದಕ್ಕಾಗಿ ಹನ್ನೆರಡು ಮೇಕೆಯ ಹೋತಗ ಳನ್ನೂ ಅರ್ಪಿಸಿದರು. ಇವೆಲ್ಲಾ ಕರ್ತನಿಗೆ ದಹನಬಲಿ ಯಾಗಿತ್ತು.ಅವರು ಅರಸನ ಆಜ್ಞೆಗಳನ್ನು ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ ಯಜಮಾ ನರಿಗೂ ಒಪ್ಪಿಸಿದರು. ಆಗ ಅವರ ಜನರಿಗೂ ದೇವರ ಆಲಯಕ್ಕೂ ಸಹಾಯಮಾಡಿದರು.

ಕೀರ್ತನೆಗಳು 51:19

ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.

ಯೆರೆಮಿಯ 41:5

ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ

Interlinear

Choose Theme