ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;
Cross references
ಅರಸನೂ ಅವನ ಹಿಂದೆ ಎಲ್ಲಾ ಜನರೂ ಹೊರಟು ಹೋಗಿ ದೂರವಾದ ಸ್ಥಳದಲ್ಲಿ ನಿಂತರು.
ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವನು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.
ನಿನ್ನನ್ನು ಆತನು ಹಾಗೆಯೇ ಇಕ್ಕಟ್ಟಿನೊಳಗಿಂದ ತೆಗೆದು ಇಕ್ಕಟ್ಟಿಲ್ಲದ ವಿಶಾಲವಾದ ಸ್ಥಳಕ್ಕೆ ಬರಮಾಡ ಬಹುದಾಗಿತ್ತು; ನಿನ್ನ ಮೇಜಿನ ಮೇಲೆ ಇಡತಕ್ಕವುಗಳು ಕೊಬ್ಬಿನಿಂದ ತುಂಬಿದವುಗಳಾಗಿರುವವು.
ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.
ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ.
ನನ್ನ ಯೌವನದಿಂದ ನನಗೆ ಅವರು ಬಹಳ ಬಾಧಿಸಿದ್ದಾರೆಂದು ಇಸ್ರಾ ಯೇಲು ಈಗ ಹೇಳಬಹುದು.
ಕುಂಟನು ಜಿಂಕೆಯಂತೆ ಹಾರುವನು ಮೂಕನ ನಾಲಿಗೆ ಹಾಡು ವದು; ಅರಣ್ಯದಲ್ಲಿ ನೀರೂ ಮರುಭೂಮಿಯಲ್ಲಿ ಒರ ತೆಗಳೂ ಒಡೆಯುವವು.
ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ--ಓ ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.
ನಾವು ಬಹು ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯದೊಳಗೆ ಸೇರಬೇಕೆಂಬ ದಾಗಿ ಹೇಳಿ ನಂಬಿಕೆಯಲ್ಲಿ ಸ್ಥಿರವಾಗಿರಬೇಕೆಂದು ಅವರನ್ನು ಎಚ್ಚರಿಸಿದರು.
ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ; ಯಾಕಂದರೆ ಸಂಕಟ ಗಳನ್ನು ಅನುಭವಿಸುವದಕ್ಕಾಗಿ ನಾವು ನೇಮಿಸಲ್ಪಟ್ಟವ ರೆಂದು ನೀವೇ ಬಲ್ಲಿರಷ್ಟೆ.
ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಎಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣೆಯುಳ್ಳ ವನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.
ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.