ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ.
Cross references
ಅದು ನಿನ್ನ ದೇವರಾದ ಕರ್ತನು ಪರಾಂಬರಿಸುವ ದೇಶವೇ; ವರುಷದ ಆರಂಭ ದಿಂದ ಅಂತ್ಯದ ವರೆಗೂ ಯಾವಾಗಲೂ ನಿನ್ನ ದೇವ ರಾದ ಕರ್ತನ ಕಣ್ಣುಗಳು ಅದರ ಮೇಲೆ ಇವೆ.
ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ;
ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.
ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ.
ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
ನಿನ್ನ ಸಭೆಯು ಅದರಲ್ಲಿ ವಾಸಮಾಡಿತು; ಓ ದೇವರೇ, ನಿನ್ನ ಸಮೃದ್ಧಿ ಯಿಂದ ಬಡವರನ್ನು ತೃಪ್ತಿಪಡಿಸಿದಿ.
ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.
ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
ಮೂಢರು ಮೂರ್ಖತನಕ್ಕೆ ಬಾಧ್ಯರಾಗು ತ್ತಾರೆ; ಜಾಣರು ತಿಳುವಳಿಕೆಯ ಕಿರೀಟವನ್ನು ಪಡೆದು ಕೊಳ್ಳುತ್ತಾರೆ.
ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?
ಓ ದೇಶವೇ, ಭಯಪಡಬೇಡ, ಉಲ್ಲಾಸಿಸಿ ಸಂತೋಷವಾಗಿರು; ಕರ್ತನು ಮಹತ್ತಾದವುಗಳನ್ನು ಮಾಡುತ್ತಾನೆ.
ಬೀಜವು ಇನ್ನು ಕಣಜದಲ್ಲಿ ಉಂಟೋ? ಮತ್ತು ದ್ರಾಕ್ಷೆ, ಅಂಜೂರ, ದಾಳಿಂಬರ, ಎಣ್ಣೆ ಮರಗಳು ಇನ್ನು ಫಲಿಸಲಿಲ್ಲ ವಲ್ಲಾ. ಈ ದಿನವು ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.
ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ.
ನೀನು ಅವನನ್ನು ದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವ ವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟು ನಿನ್ನ ಕೈಕೆಲಸಗಳ ಮೇಲೆ ಅವನನ್ನು ನೇಮಿಸಿದ್ದೀ;