Home Bibles ಕೀರ್ತನೆಗಳು 62:9 · ಕನ್ನಡ ಬೈಬಲ್
ಕೀರ್ತನೆಗಳು 62:9 · ಕನ್ನಡ ಬೈಬಲ್

ನಿಶ್ಚಯವಾಗಿ ಅಲ್ಪರು ವ್ಯರ್ಥರೇ, ಘನವಂತರು ಸುಳ್ಳೇ; ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿದರೆ ಧೂಳಿ ಗಿಂತಲೂ ಲಘುವಾಗಿದ್ದಾರೆ.

Cross references

1 ಸಮುವೇಲ 1:15

ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.

1 ಸಮುವೇಲ 18:5

ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಅವನು ಬುದ್ಧಿ ಯಿಂದ ಕಾರ್ಯವನ್ನು ನಡಿಸುತ್ತಿದ್ದನು. ಆದದರಿಂದ ಸೌಲನು ಅವನನ್ನು ಯುದ್ಧಸ್ಥರ ಮೇಲೆ ಅಧಿಕಾರಿಯಾಗ ಮಾಡಿದನು. ಅವನು ಸಮಸ್ತ ಜನರ ದೃಷ್ಟಿಯಲ್ಲಿಯೂ ಸೌಲನ ಎಲ್ಲಾ ಸೇವಕರ ದೃಷ್ಟಿಯಲ್ಲಿಯೂ ಒಪ್ಪಿಗೆಯಾಗಿದ್ದನು.

1 ಸಮುವೇಲ 18:7

ಆ ಸ್ತ್ರೀಯರು ಹಾಡುತ್ತಾ ಒಬ್ಬರಿಗೊಬ್ಬರು--ಸೌಲನು ಸಾವಿರಗಳನ್ನೂ ದಾವೀ ದನು ಹತ್ತು ಸಾವಿರಗಳನ್ನೂ ಕೊಂದನೆಂದು ಪ್ರತ್ಯುತ್ತರ ಕೊಟ್ಟರು.

1 ಸಮುವೇಲ 18:21

ಅವನಿಗೆ ಉರುಲಾಗಿರುವ ಹಾಗೆಯೂ ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡನು. ಆದದರಿಂದ ಸೌಲನು ದಾವೀದನಿಗೆ--ನೀನು ಎರಡನೆ ಯವಳಿಂದ ಈ ಹೊತ್ತು ಅಳಿಯನಾಗು ಅಂದನು.

1 ಸಮುವೇಲ 23:12

ಕೆಯಾಲಾ ಪಟ್ಟಣದವರು ನನ್ನನ್ನು ನನ್ನ ಜನರನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ ಎಂದು ದಾವೀದನು ಕೇಳಿದಾಗ ಕರ್ತನು--ಅವರು ಒಪ್ಪಿಸಿ ಕೊಡುವರು ಅಂದನು.

1 ಸಮುವೇಲ 23:19

ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?

1 ಸಮುವೇಲ 26:21

ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು.

2 ಸಮುವೇಲ 15:6

ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲ್ಯರೆಲ್ಲರಿಗೆ ಮಾಡಿ ದನು. ಈ ರೀತಿಯಲ್ಲಿ ಅಬ್ಷಾಲೋಮನು ಇಸ್ರಾ ಯೇಲ್ಯರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲ್ಯರ ಹೃದಯಗಳನ್ನು ಕದ್ದುಕೊಂಡನು.

2 ಸಮುವೇಲ 15:31

ಅಹೀತೋಫೆಲನು ಅಬ್ಷಾಲೋ ಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾ ನೆಂದು ದಾವೀದನಿಗೆ ತಿಳಿಸಲ್ಪಟ್ಟಾಗ ದಾವೀದನು--ಕರ್ತನೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವಾಗ ಮಾಡು ಅಂದನು.

2 ಅರಸುಗಳು 19:14

ಹಿಜ್ಕೀ ಯನು ಸೇವಕರ ಕೈಯಿಂದ ಪತ್ರವನ್ನು ತಕ್ಕೊಂಡು ಓದಿದಾಗ ಹಿಜ್ಕೀಯನು ಕರ್ತನ ಮನೆಗೆ ಹೋಗಿ ಅದನ್ನು ಕರ್ತನ ಮುಂದೆ ಹಾಸಿದನು.

ಕೀರ್ತನೆಗಳು 39:5

ಇಗೋ, ನನ್ನ ದಿವಸ ಗಳನ್ನು ಗೇಣುದ್ದವಾಗಿ ಮಾಡಿದ್ದೀ; ನನ್ನ ಆಯುಷ್ಯವು ನಿನ್ನ ಮುಂದೆ ಏನೂ ಇಲ್ಲದ ಹಾಗಿದೆ; ನಿಶ್ಚಯವಾಗಿ ಉತ್ತಮ ಸ್ಥಿತಿಯಲ್ಲಿರುವ ಪ್ರತಿಯೊಬ್ಬನು ಒಟ್ಟಾರೆಯಲ್ಲಿ ವ್ಯರ್ಥವಾದವನೇ. ಸೆಲಾ.

ಕೀರ್ತನೆಗಳು 39:11

ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.

ಕೀರ್ತನೆಗಳು 46:2

ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯ ಲ್ಪಟ್ಟರೂ

ಕೀರ್ತನೆಗಳು 55:13

ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ.

ಕೀರ್ತನೆಗಳು 71:7

ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.

ಕೀರ್ತನೆಗಳು 116:11

ಮನುಷ್ಯ ರೆಲ್ಲರು ಸುಳ್ಳುಗಾರರೆಂದು ನಾನು ಆತುರತೆಯಿಂದ ಹೇಳಿದೆನು.

ಕೀರ್ತನೆಗಳು 118:9

ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.

ಕೀರ್ತನೆಗಳು 142:3

ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ.

ಯೆಶಾಯ 26:4

ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.

ಯೆಶಾಯ 40:15

ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆ ಯಿಂದುದುರುವ ಹನಿಯಂತೆಯೂ ತಕ್ಕಡಿಯಲ್ಲಿನ ದೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.

ಯೆಶಾಯ 40:17

ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ; ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ ವ್ಯರ್ಥ ವಾಗಿಯೂ ಇವೆ.

ದಾನಿಯೇಲ 5:27

ತೇಕೆಲ್‌ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.

ಮತ್ತಾಯ 21:9

ಆತನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು--ದಾವೀದನ ಕುಮಾರನಿಗೆ ಹೊಸನ್ನ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು; ಮಹೋನ್ನತದಲ್ಲಿ ಹೊಸನ್ನ ಎಂದು ಕೂಗುತ್ತಾ ಹೇಳಿದರು.

ಯೋಹಾನ 19:15

ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು.

ರೋಮಾಪುರದವರಿಗೆ 3:4

ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ.

Interlinear

Choose Theme