Home Bibles ಕೀರ್ತನೆಗಳು 61:4 · ಕನ್ನಡ ಬೈಬಲ್
ಕೀರ್ತನೆಗಳು 61:4 · ಕನ್ನಡ ಬೈಬಲ್

ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.

Cross references

ರೂತ 2:12

ನೀನು ಮಾಡಿದ್ದಕ್ಕೆ ಕರ್ತನು ನಿನಗೆ ಬದಲು ಕೊಡಲಿ; ಇಸ್ರಾಯೇಲ್‌ ದೇವರಾದ ಕರ್ತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಆತನಿಂದ ಬರುವ ನಿನ್ನ ಬಹುಮಾನ ಪರಿಪೂರ್ಣವಾಗಿರಲಿ ಅಂದನು.

ಕೀರ್ತನೆಗಳು 15:1

ಕರ್ತನೇ, ನಿನ್ನ ಗುಡಾರದಲ್ಲಿ ತಂಗುವವನು ಯಾರು? ನಿನ್ನ ಪರಿಶುದ್ಧ ಪರ್ವತ ದಲ್ಲಿ ವಾಸಮಾಡುವವನು ಯಾರು?

ಕೀರ್ತನೆಗಳು 17:8

ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.

ಕೀರ್ತನೆಗಳು 23:6

ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.

ಕೀರ್ತನೆಗಳು 27:4

ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.

ಕೀರ್ತನೆಗಳು 57:1

ನನ್ನ ಮೇಲೆ ಕರುಣೆಯಿಡು, ಓ ದೇವರೇ, ನನ್ನನ್ನು ಕರುಣಿಸು; ನನ್ನ ಪ್ರಾಣವು ನಿನ್ನನ್ನು ಆಶ್ರಯಿಸಿಕೊಳ್ಳುತ್ತದೆ. ಆಪತ್ತುಗಳು ದಾಟುವ ವರೆಗೂ ನಿನ್ನ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.

ಕೀರ್ತನೆಗಳು 61:7

ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.

ಕೀರ್ತನೆಗಳು 62:7

ದೇವರಲ್ಲಿಯೇ ನನ್ನ ರಕ್ಷಣೆಯೂ ಘನವೂ ಇದೆ; ನನ್ನ ಬಲದ ಬಂಡೆಯೂ ನನ್ನ ಆಶ್ರಯವೂ ದೇವರಲ್ಲಿಯೇ.

ಕೀರ್ತನೆಗಳು 63:7

ನೀನು ನನ್ನ ಸಹಾಯಕನಾಗಿರುವದರಿಂದ ನಿನ್ನ ರೆಕ್ಕೆಗಳ ನೆರಳಿನಲ್ಲಿ ನಾನು ಉತ್ಸಾಹಪಡುವೆನು.

ಕೀರ್ತನೆಗಳು 90:1

ಕರ್ತನೇ, ತಲತಲಾಂತರಗಳಲ್ಲಿ ನೀನು ನಮ್ಮ ವಾಸಸ್ಥಾನವಾಗಿದ್ದೀ.

ಕೀರ್ತನೆಗಳು 91:1

ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.

ಕೀರ್ತನೆಗಳು 91:4

ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.

ಕೀರ್ತನೆಗಳು 92:13

ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು.

ಕೀರ್ತನೆಗಳು 142:4

ನನ್ನ ಬಲಗಡೆಯಲ್ಲಿ ನೋಡಿದೆನು; ನೋಡಿದಾಗ ನನ್ನನ್ನು ತಿಳಿಯುವವನು ಯಾವನೂ ಇಲ್ಲ. ಆಶ್ರಯವು ನನ್ನ ಬಳಿಯಿಂದ ತಪ್ಪಿಹೋಯಿತು; ನನ್ನ ಪ್ರಾಣಕ್ಕಾಗಿ ಚಿಂತಿಸುವವನು ಒಬ್ಬನೂ ಇಲ್ಲ.

ಸಾಮೇತಿಗಳು 18:10

ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ.

ಮತ್ತಾಯ 23:37

ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ

ಹೆಬ್ರಿಯರಿಗೆ 6:18

ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.

ಪ್ರಕಟನೆ 3:12

ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನೂ ಪರಲೋಕದಲ್ಲಿರುವ ನನ್ನ ದೇವರ ಬಳಿಯಿಂದ ಇಳಿದು ಬರುವ ಹೊಸ ಯೆರೂಸಲೇಮ್‌ ಎಂಬ

Interlinear

Choose Theme