Home Bibles ☰ Books ಕೀರ್ತನೆಗಳು 61:1 · ಕನ್ನಡ ಬೈಬಲ್
ಕೀರ್ತನೆಗಳು 61:1 · ಕನ್ನಡ ಬೈಬಲ್

ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.

Cross references

ಕೀರ್ತನೆಗಳು 4:1

ನನ್ನ ನೀತಿಯಾದ ಓ ದೇವರೇ, ನಾನು ಮೊರೆಯಿಡಲು ನನಗೆ ಕಿವಿಗೊಡು, ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ. ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು.

ಕೀರ್ತನೆಗಳು 5:1

ಕರ್ತನೇ, ನನ್ನ ಮಾತುಗಳಿಗೆ ಕಿವಿಗೊಡು, ನನ್ನ ಧ್ಯಾನವನ್ನು ಲಕ್ಷ್ಯಕ್ಕೆ ತಂದುಕೋ.

ಕೀರ್ತನೆಗಳು 6:1

ಓ ಕರ್ತನೇ, ನಿನ್ನ ಕೋಪದಿಂದ ನನ್ನನ್ನು ಗದರಿಸಬೇಡ; ನಿನ್ನ ಉಗ್ರತೆಯಿಂದ ನನ್ನನ್ನು ದಂಡಿಸಬೇಡ.

ಕೀರ್ತನೆಗಳು 17:1

ಓ ಕರ್ತನೇ, ನ್ಯಾಯವನ್ನು ಕೇಳು; ನನ್ನ ಮೊರೆಯನ್ನು ಆಲೈಸು; ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಮೋಸದ ತುಟಿಗಳಿಂದ ಬಂದ ದ್ದಲ್ಲ.

ಕೀರ್ತನೆಗಳು 28:2

ನಾನು ನಿನಗೆ ಮೊರೆಯಿಡು ವಾಗ ನನ್ನ ಕೈಗಳನ್ನು ನಿನ್ನ ಪರಿಶುದ್ಧ ದೈವೋಕ್ತಿಯ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯ ಶಬ್ದವನ್ನು ಕೇಳು.

ಕೀರ್ತನೆಗಳು 54:1

ಓ ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸಿ ನಿನ್ನ ಬಲದಿಂದ ನನಗೆ ನ್ಯಾಯ ತೀರಿಸು.

ಕೀರ್ತನೆಗಳು 55:1

ಓ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗೆ ನಿನ್ನನ್ನು ಮರೆಮಾಡಿಕೊಳ್ಳಬೇಡ.

ಕೀರ್ತನೆಗಳು 64:1

ಓ ದೇವರೇ ನನ್ನ ಪ್ರಾರ್ಥನೆಯಲ್ಲಿ ನನ್ನ ಸ್ವರವನ್ನು ಕೇಳು; ಶತ್ರುವಿನ ಹೆದರಿಕೆ ಯಿಂದ ನನ್ನ ಜೀವವನ್ನು ಕಾಯಿ.

ಕೀರ್ತನೆಗಳು 86:6

ಓ ಕರ್ತನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸು.

ಕೀರ್ತನೆಗಳು 130:2

ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.

ಫಿಲಿಪ್ಪಿಯವರಿಗೆ 4:6

ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.

Interlinear

Choose Theme