ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.
Cross references
ನಾನು ನನ್ನ ದೇಶದಲ್ಲಿ ನಿನ್ನ ಕ್ರಿಯೆ ಗಳನ್ನು ಕುರಿತೂ ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯವು.
ಆದರೆ ನಾನು ಬಂದು ನನ್ನ ಕಣ್ಣು ಗಳಿಂದ ನೋಡುವವರೆಗೂ ಆ ಮಾತುಗಳನ್ನು ನಂಬದೆ ಹೋದೆನು. ಇಗೋ, ಇದರಲ್ಲಿ ಅರ್ಧವೂ ನನಗೆ ಹೇಳಲ್ಪಟ್ಟಿದ್ದಿಲ್ಲ; ನಿನ್ನ ಜ್ಞಾನವೂ ಸಂಪತ್ತೂ ನಾನು ಕೇಳಿದ ಕೀರ್ತಿಗಿಂತ ಅಧಿಕವಾಗಿರುವದು.
ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ
ನಿನ್ನ ಪ್ರೀತಿಯೂ ಕೃಪೆಯೂ ನನ್ನ ಕಣ್ಣುಗಳ ಮುಂದೆ ಅವೆ; ನಾನು ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.
ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.
ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
ಚೀಯೋನಿನ ವಿಷಯ ಹೇಳುವದೇನಂದರೆ --ಇಂಥಿಂಥವರು ಅದರಲ್ಲಿ ಹುಟ್ಟಿದರೆಂದೂ ಮಹೋ ನ್ನತನು ತಾನೇ ಅದನ್ನು ಸ್ಥಾಪಿಸುವನು.
ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.
ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ.
ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.
ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.