ಅನ್ಯಜನಾಂಗವನ್ನು ಆಳುತ್ತಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ.ಜನರ ಅಧಿಪತಿಗಳು ಅಬ್ರಹಾಮನ ದೇವರ ಪ್ರಜೆಯ ಸಂಗಡ ಕೂಡಿ ಕೊಂಡಿದ್ದಾರೆ; ಭೂಮಿಯ ಗುರಾಣಿಗಳು ದೇವರ ವಶದಲ್ಲಿವೆ; ಆತನು ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದಾನೆ.
Cross references
ಆಕಾಶ ಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ.
ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ. ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ.
ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.
ಓ ದೇವರೇ, ನಿನ್ನ ಸಿಂಹಾಸ ನವು ಎಂದೆಂದಿಗೂ ಇರುವದು; ನಿನ್ನ ರಾಜ್ಯದಂಡವು ನ್ಯಾಯದಂಡವಾಗಿದೆ.
ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.
ನೀತಿಯೂ ನ್ಯಾಯವೂ ನಿನ್ನ ಸಿಂಹಾಸನದ ಸ್ಥಳವಾಗಿದೆ ಕೃಪೆಯೂ ಸತ್ಯವೂ ನಿನ್ನ ಮುಂದೆ ಹೋಗುತ್ತವೆ;
ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.
ವಿಧಿಯಿಂದ ಕೇಡನ್ನು ಕಲ್ಪಿಸುವ ಅಪರಾಧದ ಸಿಂಹಾಸನವು ನಿನ್ನ ಸಂಗಡ ಅನ್ಯೋನ್ಯವಾಗಿರು ವದೋ?
ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.
ಕರ್ತನು ಆಳುತ್ತಾನೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋ ಷಿಸಲಿ.
ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.