Home Bibles ಕೀರ್ತನೆಗಳು 41:5 · ಕನ್ನಡ ಬೈಬಲ್
ಕೀರ್ತನೆಗಳು 41:5 · ಕನ್ನಡ ಬೈಬಲ್

ಅವನು ಸತ್ತು ಅವನ ಹೆಸರು ನಾಶವಾಗುವದು ಯಾವಾಗ ಎಂದು ನನ್ನ ಶತ್ರುಗಳು ನನ್ನನ್ನು ಕುರಿತು ಕೇಡನ್ನು ಮಾತನಾಡುತ್ತಾರೆ.

Cross references

ಯೋಬ 18:17

ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು.

ಯೋಬ 20:7

ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು.

ಕೀರ್ತನೆಗಳು 22:6

ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.

ಕೀರ್ತನೆಗಳು 38:12

ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.

ಕೀರ್ತನೆಗಳು 51:3

ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.

ಕೀರ್ತನೆಗಳು 51:6

ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು.

ಕೀರ್ತನೆಗಳು 56:2

ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.

ಕೀರ್ತನೆಗಳು 57:2

ಮಹೋನ್ನತನಾದ ದೇವರಿಗೆ, ನನಗೋಸ್ಕರ ಕಾರ್ಯ ಗಳನ್ನು ಸಫಲಮಾಡುವ ದೇವರನ್ನೇ, ಕೂಗುತ್ತೇನೆ.

ಕೀರ್ತನೆಗಳು 67:2

ಆಗ ನಿನ್ನ ಮಾರ್ಗವೂ ನಿನ್ನ ರಕ್ಷಣೆಯ ಸ್ವಸ್ಥತೆಯೂ, ಭೂಮಿಯಲ್ಲಿ, ಎಲ್ಲಾ ಜನಾಂಗಗಳಿಗೆ ತಿಳಿಯಲ್ಪಡು ವದು.

ಕೀರ್ತನೆಗಳು 86:3

ಓ ಕರ್ತನೇ, ನನ್ನನ್ನು ಕರುಣಿಸು; ದಿನವೆಲ್ಲಾ ನಿನಗೆ ಕೂಗು ತ್ತೇನೆ.

ಕೀರ್ತನೆಗಳು 86:16

ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.

ಕೀರ್ತನೆಗಳು 102:8

ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರು ನನಗೆ ವಿರೋಧ ವಾಗಿ ಆಣೆ ಇಡುತ್ತಾರೆ.

ಸಾಮೇತಿಗಳು 10:7

ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ.

Interlinear

Choose Theme