Home Bibles ☰ Books ಕೀರ್ತನೆಗಳು 39:7 · ಕನ್ನಡ ಬೈಬಲ್
ಕೀರ್ತನೆಗಳು 39:7 · ಕನ್ನಡ ಬೈಬಲ್

ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನನ್ನ ನಿರೀಕ್ಷೆ ನಿನ್ನಲ್ಲಿ ಅದೆ.

Cross references

ಆದಿಕಾಂಡ 49:18

ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ.

ಯೋಬ 13:15

ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.

ಯೋಬ 14:2

ಅವನು ಹೂವಿನ ಹಾಗೆ ಅರಳು ತ್ತಾನೆ ಮತ್ತು ಕೊಯ್ಯಲ್ಪಡುತ್ತಾನೆ; ಅವನು ನೆರಳಿನಂತೆ ಓಡಿಹೋಗುತ್ತಾನೆ, ಹಾಗೂ ಮುಂದುವರೆಯುವ ದಿಲ್ಲ.

ಕೀರ್ತನೆಗಳು 38:15

ಓ ಕರ್ತನೇ, ನಿನ್ನನ್ನು ನಿರೀಕ್ಷಿಸುತ್ತೇನೆ; ನನ್ನ ದೇವರಾದ ಓ ಕರ್ತನೇ, ನೀನು ಉತ್ತರ ಕೊಡುವಿ.

ಕೀರ್ತನೆಗಳು 49:11

ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ.

ಕೀರ್ತನೆಗಳು 119:81

ನನ್ನ ಪ್ರಾಣವು ನಿನ್ನ ರಕ್ಷಣೆಗಾಗಿ ಕುಗ್ಗಿ ಹೋಗುತ್ತದೆ; ನಿನ್ನ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.

ಕೀರ್ತನೆಗಳು 119:166

ಕರ್ತನೇ, ನಿನ್ನ ರಕ್ಷಣೆಗೆ ಕಾದುಕೊಂಡಿದ್ದೇನೆ; ನಿನ್ನ ಆಜ್ಞೆಗಳನ್ನು ನಡಿಸಿದ್ದೇನೆ.

ಕೀರ್ತನೆಗಳು 130:5

ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.

ಸಭಾಪ್ರಸಂಗಿ 2:21

ಜ್ಞಾನ ದಲ್ಲಿಯೂ ತಿಳುವಳಿಕೆಯಲ್ಲಿಯೂ ಯಥಾರ್ಥವಾಗಿ ಪ್ರಯಾಸಪಟ್ಟ ಒಬ್ಬ ಮನುಷ್ಯನಿದ್ದಾನೆ; ಆದರೂ ಇವು ಗಳಲ್ಲಿ ಪ್ರಯಾಸಪಡದೆ ಇದ್ದ ಮನುಷ್ಯನಿಗೆ ಪಾಲಾಗಿ ಅವನು ಬಿಟ್ಟುಬಿಡುವನು. ಇದು ವ್ಯರ್ಥವೂ ದೊಡ್ಡ ಕೇಡೂ ಆಗಿದೆ.

ಸಭಾಪ್ರಸಂಗಿ 4:8

ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ.

ಲೂಕ 2:25

ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.

ರೋಮಾಪುರದವರಿಗೆ 15:13

ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.

Interlinear

Choose Theme