ಕೇಡಿನಿಂದ ನಿನ್ನ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ಕಾಯಿ.
Cross references
ದೇವರಿಗೆ ವಿರೋಧವಾಗಿ ನಿನ್ನ ಆತ್ಮವನ್ನು ತಿರುಗಿಸಿ ನಿನ್ನ ಬಾಯೊಳಗಿಂದ ಮಾತುಗಳನ್ನು ಹೊರಡಿಸುತ್ತೀ ಯಲ್ಲಾ.
ನನ್ನ ನಾಲಿಗೆಯಿಂದ ಪಾಪಮಾಡದ ಹಾಗೆ ನನ್ನ ಮಾರ್ಗಗಳನ್ನು ಕಾಪಾಡಿ ಕೊಳ್ಳುವೆನೆಂದೂ ದುಷ್ಟನು ನನ್ನ ಮುಂದೆ ಇರುವಾಗ ನನ್ನ ಬಾಯಿಗೆ ಕಡಿವಾಣ ಇಟ್ಟುಕೊಳ್ಳುವೆನೆಂದೂ ಹೇಳಿದೆನು.
ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ.
ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ
ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು.
ಸತ್ಯದ ತುಟಿಯು ಸದಾ ಸ್ಥಿರಗೊಳ್ಳು ವದು; ಸುಳ್ಳಾಡುವ ನಾಲಿಗೆಯು ಕ್ಷಣಿಕ.
ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.
ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು.
ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು.
ತನ್ನ ಬಾಯಿಯನ್ನು ನಾಲಿಗೆಯನ್ನು ಕಾಯುವ ವನು ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ.
ಆತನು--ನಿಶ್ಚಯವಾಗಿ ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ ಎಂದು ಹೇಳಿದನು; ಆದದರಿಂದ ಅವರಿಗೆ ರಕ್ಷಕನಾಗಿದ್ದನು.
ನೀವು ಬದುಕುವ ಹಾಗೆಯೂ ನೀವು ಹೇಳುವ ಪ್ರಕಾರ ಸೈನ್ಯಾಧಿಪತಿಯಾದ ಕರ್ತನು, ನಿಮ್ಮ ಸಂಗಡ ಇರುವ ಹಾಗೆಯೂ ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ದನ್ನು ಹುಡುಕಿರಿ.
ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.