ಹರಿದು ಬಿಡುವಂಥ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿ ತೆರೆದಿ ದ್ದಾರೆ.
Cross references
ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
ಅವನು ತನ್ನ ಬೇಟೆಯ ದುರಾಶೆಯಿಂದಿರುವ ಸಿಂಹದ ಹಾಗೆಯೂ ಗುಪ್ತವಾದ ಸ್ಥಳಗಳಲ್ಲಿ ಹೊಂಚು ಹಾಕಿರುವ ಸಿಂಹದ ಮರಿಯ ಹಾಗೆಯೂ ಇದ್ದಾನೆ.
ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ--
ನನ್ನನ್ನು ಸಿಂಹದ ಬಾಯಿಂದ ರಕ್ಷಿಸು; ನನ್ನನ್ನು ಕಾಡುಕೋಣಗಳ ಕೊಂಬುಗಳಿಂದ ತಪ್ಪಿಸಿ ಉತ್ತರ ಕೊಟ್ಟೆಯಲ್ಲಾ.
ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
ಹೌದು, ನನಗೆ ವಿರೋಧವಾಗಿ ತಮ್ಮ ಬಾಯನ್ನು ಅಗಲ ಮಾಡಿ--ಆಹಾ, ಆಹಾ ನಮ್ಮ ಕಣ್ಣು ಅದನ್ನು ನೋಡಿತು ಅನ್ನುತ್ತಾರೆ.
ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ.
ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ.
ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು.
ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.