Home Bibles ಕೀರ್ತನೆಗಳು 18:30 · ಕನ್ನಡ ಬೈಬಲ್
ಕೀರ್ತನೆಗಳು 18:30 · ಕನ್ನಡ ಬೈಬಲ್

ದೇವರ ಮಾರ್ಗವಾದರೋ ಸಂಪೂರ್ಣವಾದದ್ದು; ಕರ್ತನ ವಾಕ್ಯವು ಪುಟಕ್ಕೆ ಹಾಕಿದ್ದಾಗಿದೆ; ಆತನು ತನ್ನಲ್ಲಿ ಭರವಸವಿಟ್ಟವರೆಲ್ಲರಿಗೆ ಗುರಾಣಿಯಾಗಿದ್ದಾನೆ.

Cross references

ದ್ವಿತೀಯೋಪದೇಶಕಾಂಡ 32:4

ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.

2 ಸಮುವೇಲ 22:31

ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ.

ಕೀರ್ತನೆಗಳು 12:6

ಕರ್ತನ ವಾಕ್ಯಗಳು ಶುದ್ಧವಾಕ್ಯಗಳಾಗಿವೆ: ಮಣ್ಣಿನ ಕುಲುಮೆಯಲ್ಲಿ ಏಳು ಸಾರಿ ಕರಗಿ ಪುಟಕ್ಕೆ ಹಾಕಿದ ಬೆಳ್ಳಿಯಂತೆ ಇವೆ.

ಕೀರ್ತನೆಗಳು 17:7

ನಿನ್ನಲ್ಲಿ ಭರವಸವಿಟ್ಟವರ ವಿರೋಧವಾಗಿ ಏಳುವ ದರಿಂದ ನೀನು ನಿನ್ನ ಬಲಗೈಯಿಂದ ರಕ್ಷಿಸುವಾತನೇ, ಆಶ್ಚರ್ಯವಾದ ನಿನ್ನ ಪ್ರೀತಿ ಕರುಣೆಯನ್ನು ತೋರಿಸು.

ಕೀರ್ತನೆಗಳು 18:2

ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.

ಕೀರ್ತನೆಗಳು 19:7

ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.

ಕೀರ್ತನೆಗಳು 25:10

ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.

ಕೀರ್ತನೆಗಳು 84:11

ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.

ಕೀರ್ತನೆಗಳು 119:140

ನಿನ್ನ ವಾಕ್ಯವು ಬಹಳ ಶುದ್ಧವಾಗಿದೆ; ಆದದರಿಂದ ನಿನ್ನ ಸೇವಕನು ಅದನ್ನು ಪ್ರೀತಿಮಾಡುತ್ತಾನೆ.

ಸಾಮೇತಿಗಳು 30:5

ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ.

ದಾನಿಯೇಲ 4:37

ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.

ರೋಮಾಪುರದವರಿಗೆ 12:2

ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.

ಪ್ರಕಟನೆ 15:3

ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.

Interlinear

Choose Theme