ಓ ಯೆರೂ ಸಲೇಮೇ, ಕರ್ತನನ್ನು ಸ್ತುತಿಸು; ಓ ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
Cross references
ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ.
ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.
ಇಸ್ರಾಯೇಲು ತನ್ನನ್ನು ಉಂಟುಮಾಡಿದಾತನಲ್ಲಿ ಸಂತೋಷಿಸಲಿ; ಚೀಯೋನಿನ ಮಕ್ಕಳು ತಮ್ಮ ಅರಸನಲ್ಲಿ ಉಲ್ಲಾಸಿಸಲಿ.
ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.