Home Bibles ಕೀರ್ತನೆಗಳು 142:2 · ಕನ್ನಡ ಬೈಬಲ್
ಕೀರ್ತನೆಗಳು 142:2 · ಕನ್ನಡ ಬೈಬಲ್

ಆತನ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ಆತನ ಮುಂದೆ ತಿಳಿಸಿದ್ದೇನೆ.

Cross references

1 ಸಮುವೇಲ 1:15

ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು.

ಕೀರ್ತನೆಗಳು 18:4

ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು.

ಕೀರ್ತನೆಗಳು 28:1

ನನ್ನ ಬಂಡೆಯಾದ ಓ ಕರ್ತನೇ, ನಿನಗೆ ಮೊರೆಯಿಡುತ್ತೇನೆ; ಮೌನವಾಗಿರಬೇಡ. ನೀನು ಸುಮ್ಮನಿದ್ದರೆ ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನನಾಗುವೆನು.

ಕೀರ್ತನೆಗಳು 42:4

ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.

ಕೀರ್ತನೆಗಳು 62:8

ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.

ಕೀರ್ತನೆಗಳು 102:1

ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಯು ನಿನ್ನ ಬಳಿಗೆ ಸೇರಲಿ.

ಯೆಶಾಯ 26:16

ಕರ್ತನೇ, ಇಕ್ಕಟ್ಟಿನಲ್ಲಿ ಅವರು ನಿನ್ನನ್ನು ಹುಡುಕಿದರು, ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿ ದರು.

ರೋಮಾಪುರದವರಿಗೆ 8:26

ಹಾಗೆಯೇ ಆತ್ಮನು ಸಹ ನಮ್ಮ ಬಲಹೀನತೆ ಗಳಿಗೆ ಸಹಾಯಮಾಡುತ್ತಾನೆ; ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲವಾದ್ದರಿಂದ ಆತ್ಮನು ತಾನೇ ಉಚ್ಚರಿಸಲಾಗ ದಂಥ ನರಳಾಟದಿಂದ ನಮಗೋಸ್ಕರ ವಿಜ್ಞಾಪನೆ ಮಾಡುತ್ತಾನೆ.

ಫಿಲಿಪ್ಪಿಯವರಿಗೆ 4:6

ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.

ಹೆಬ್ರಿಯರಿಗೆ 5:7

ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು.

Interlinear

Choose Theme