ನಿನ್ನ ಮಕ್ಕಳಿಗೆ ನಾನು ಕಲಿಸುವ ನನ್ನ ಒಡಂಬಡಿಕೆಯನ್ನೂ ನನ್ನ ಸಾಕ್ಷಿಯನ್ನೂ ಕೈಕೊಂಡರೆ ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನ ದಲ್ಲಿ ಕೂಡ್ರುವರು.
Cross references
ನೀನು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ನಿನ್ನ ದೇವರಾದ ಕರ್ತನ ನಿಯಮಗಳನ್ನೂ ಆಜ್ಞೆಗಳನ್ನೂ ನ್ಯಾಯಗಳನ್ನೂ ಸಾಕ್ಷಿಗಳನ್ನೂ ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವ ಹಾಗೆ ಆತನ ಆಜ್ಞೆಯನ್ನು ಕೈಗೊಳ್ಳು.
ನೀನು ನಿನ್ನ ಬಾಯಿಂದ ಹೇಳಿದ್ದನ್ನು ಇಂದಿನ ಪ್ರಕಾರವೇ ನಿನ್ನ ಕೈಯಿಂದ ನೆರವೇರಿಸಿದ ಕಾರಣ ಈಗ ಇಸ್ರಾಯೇಲಿನ ದೇವರಾದ ಕರ್ತನೇ, ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಪ್ರಕಾರ ಅವರು ನನ್ನ ಮುಂದೆ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ತಪ್ಪದೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ನೀನು ನನ್ನ ತಂದೆಯೂ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ಮಾತು ನೆರವೇರಿಸು.
ಇಸ್ರಾಯೇಲನ್ನು ಆಳುವ ಮನುಷ್ಯನು ನಿನಗೆ ಕೊರತೆ ಯಾಗುವದಿಲ್ಲವೆಂದು ನಿನ್ನ ತಂದೆಯಾದ ದಾವೀದನ ಸಂಗಡ ನಾನು ಮಾಡಿದ ಒಡಂಬಡಿಕೆಯ ಪ್ರಕಾರ ನಿನ್ನ ರಾಜ್ಯದ ಸಿಂಹಾಸನವನ್ನು ಸ್ಥಿರಪಡಿಸುತ್ತೇನೆ.
ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ,
ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.
ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.
ದಾವೀದನು ಪ್ರವಾದಿಯಾಗಿದ್ದದರಿಂದ ಶರೀರದ ಪ್ರಕಾರ ತನ್ನ ಸಂತಾನದವರಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಿ ತನ್ನ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವನೆಂದು ಆಣೆಯಿಟ್ಟು ಪ್ರಮಾಣ ಪೂರ್ವಕ ವಾಗಿ ತನಗೆ ಹೇಳಿದ್ದನ್ನು ಅವನು ಬಲ್ಲವನಾಗಿದ್ದನು.