Home Bibles ಕೀರ್ತನೆಗಳು 128:5 · ಕನ್ನಡ ಬೈಬಲ್
ಕೀರ್ತನೆಗಳು 128:5 · ಕನ್ನಡ ಬೈಬಲ್

ಕರ್ತನು ನಿನ್ನನ್ನು ಚೀಯೋನಿನೊಳಗಿಂದ ಆಶೀರ್ವದಿಸುವನು; ನಿನ್ನ ಜೀವನದ ದಿವಸಗಳೆಲ್ಲಾ ನೀನು ಯೆರೂಸಲೇಮಿನ ಒಳ್ಳೆಯದನ್ನು ನೋಡುವಿ.ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.

Cross references

ಕೀರ್ತನೆಗಳು 20:2

ಪರಿಶುದ್ಧ ಸ್ಥಳದೊಳಗಿಂದ ನಿನಗೆ ಸಹಾಯ ಕಳುಹಿಸಲಿ; ಚೀಯೋ ನಿನಿಂದ ನಿನ್ನನ್ನು ಬಲಪಡಿಸಲಿ.

ಕೀರ್ತನೆಗಳು 20:3

ನಿನ್ನ ಅರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿ ನಿನ್ನ ದಹನಬಲಿಯನ್ನು ಅಂಗೀಕರಿಸಲಿ. ಸೆಲಾ.

ಕೀರ್ತನೆಗಳು 118:26

ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.

ಕೀರ್ತನೆಗಳು 122:6

ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.

ಕೀರ್ತನೆಗಳು 134:3

ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.

ಕೀರ್ತನೆಗಳು 135:21

ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ.

ಯೆಶಾಯ 2:3

ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.

ಯೆಶಾಯ 33:20

ನಮ್ಮ ಹಬ್ಬಗಳು ನಡೆಯುವ ಚೀಯೋನ್‌ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್‌ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.

ಎಫೆಸದವರಿಗೆ 1:3

ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.

Interlinear

Choose Theme