Home Bibles ಕೀರ್ತನೆಗಳು 119:69 · ಕನ್ನಡ ಬೈಬಲ್
ಕೀರ್ತನೆಗಳು 119:69 · ಕನ್ನಡ ಬೈಬಲ್

ಅಹಂಕಾರಿ ಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು; ನಾನು ಪೂರ್ಣಹೃದಯದಿಂದ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.

Cross references

ಯೋಬ 13:4

ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.

ಕೀರ್ತನೆಗಳು 35:11

ಸುಳ್ಳು ಸಾಕ್ಷಿಗಳು ಎದ್ದು ನಾನು ತಿಳಿಯದವುಗಳನ್ನು ನನ್ನ ಮೇಲೆ ಹೊರಿಸಿ ದರು.

ಕೀರ್ತನೆಗಳು 109:2

ದುಷ್ಟನ ಬಾಯಿ ಯನ್ನೂ ಮೋಸದ ಬಾಯಿಯನ್ನೂ ನನಗೆ ವಿರೋಧ ವಾಗಿ ತೆರೆದಿವೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.

ಕೀರ್ತನೆಗಳು 119:2

ಆತನ ಸಾಕ್ಷಿಗಳನ್ನು ಕೈಕೊಂಡು ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಧನ್ಯರು.

ಕೀರ್ತನೆಗಳು 119:34

ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.

ಕೀರ್ತನೆಗಳು 119:51

ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.

ಕೀರ್ತನೆಗಳು 119:58

ಪೂರ್ಣಹೃದಯ ದಿಂದ ನಿನ್ನನ್ನು ಬೇಡಿಕೊಂಡಿದ್ದೇನೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಕರುಣಿಸು.

ಕೀರ್ತನೆಗಳು 119:157

ನನ್ನನ್ನು ಹಿಂಸಿಸುವವರೂ ನನ್ನ ವೈರಿಗಳೂ ಅನೇಕ ರಾಗಿದ್ದಾರೆ; ನಿನ್ನ ಸಾಕ್ಷಿಗಳಿಂದ ನಾನು ತೊಲಗೆನು.

ಯೆರೆಮಿಯ 43:2

ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಎಲ್ಲಾ ಪಟ್ಟಣಗಳ ಮೇಲೆಯೂ ಬರಮಾಡಿದ ಎಲ್ಲಾ ಕೇಡನ್ನು ನೀವು ನೋಡಿದ್ದೀರಿ.

ಮತ್ತಾಯ 5:11

ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು.

ಮತ್ತಾಯ 6:24

ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.

ಮತ್ತಾಯ 26:59

ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು.

ಅಪೋಸ್ತಲರ ಕೃತ್ಯಗಳು 24:5

ಯಾಕಂದರೆ ಇವನು ಉಪದ್ರವ ಕೊಡುವವನೂ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೂ ನಜರೇತಿನ ಪಂಗಡದವರ ಮುಖಂ ಡನೂ ಎಂದು ನಾವು ಕಂಡೆವು.

ಅಪೋಸ್ತಲರ ಕೃತ್ಯಗಳು 24:13

ಇದಲ್ಲದೆ ಅವರು ಈಗ ನನ್ನ ಮೇಲೆ ತಪ್ಪುಹೊರಿಸುವವುಗಳು ನಿಜವೆಂದು ಸಿದ್ಧಾಂತಮಾಡಲಾರರು.

ಯಾಕೋಬ 1:8

ಎರಡು ಮನಸ್ಸುಳ್ಳವನು ತನ್ನ ಮಾರ್ಗಗಳ ಲ್ಲೆಲ್ಲಾ ಚಂಚಲನಾಗಿದ್ದಾನೆ.

Interlinear

Choose Theme