Home Bibles ಕೀರ್ತನೆಗಳು 119:62 · ಕನ್ನಡ ಬೈಬಲ್
ಕೀರ್ತನೆಗಳು 119:62 · ಕನ್ನಡ ಬೈಬಲ್

ನಿನ್ನ ನೀತಿಯ ನ್ಯಾಯವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡುವದಕ್ಕೆ ಮಧ್ಯರಾತ್ರಿಯಲ್ಲಿ ಏಳುತ್ತೇನೆ.

Cross references

ದ್ವಿತೀಯೋಪದೇಶಕಾಂಡ 4:8

ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

ಕೀರ್ತನೆಗಳು 19:9

ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ.

ಕೀರ್ತನೆಗಳು 42:8

ಆದಾಗ್ಯೂ ಹಗಲಿನಲ್ಲಿ ಕರ್ತನು ತನ್ನ ಪ್ರೀತಿ, ಕರುಣೆಯನ್ನು ಆಜ್ಞಾಪಿಸುತ್ತಾನೆ; ರಾತ್ರಿ ಯಲ್ಲಿ ನನ್ನೊಂದಿಗೆ ಆತನ ಹಾಡೂ ನನ್ನ ಜೀವಾ ಧಾರಕನಾದ ದೇವರಿಗೆ ಪ್ರಾರ್ಥಿಸುವೆನು.

ಕೀರ್ತನೆಗಳು 119:7

ನಿನ್ನ ನೀತಿಯ ನ್ಯಾಯಗಳನ್ನು ನಾನು ಕಲಿ ಯುವಾಗ ಯಥಾರ್ಥ ಹೃದಯದಿಂದ ನಿನ್ನನ್ನು ಕೊಂಡಾ ಡುವೆನು.

ಕೀರ್ತನೆಗಳು 119:75

ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.

ಕೀರ್ತನೆಗಳು 119:106

ನಿನ್ನ ನೀತಿ ವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣ ಮಾಡಿದ್ದೇನೆ; ಅದನ್ನು ಈಡೇರಿಸುವೆನು.

ಕೀರ್ತನೆಗಳು 119:137

ಕರ್ತನೇ, ನೀನು ನೀತಿವಂತನು; ನಿನ್ನ ನ್ಯಾಯ ವಿಧಿಗಳು ಯಥಾರ್ಥವಾದವುಗಳೇ.

ಕೀರ್ತನೆಗಳು 119:147

ಉದಯವನ್ನು ಎದುರುಗೊಂಡು ಮೊರೆಯಿಟ್ಟಿದ್ದೇನೆ; ನಿನ್ನ ವಾಕ್ಯಕ್ಕೆ ಎದುರು ನೋಡಿ ದ್ದೇನೆ.

ಕೀರ್ತನೆಗಳು 119:164

ನಿನ್ನ ನೀತಿಯ ವಿಧಿಗಳ ನಿಮಿತ್ತ ದಿವಸಕ್ಕೆ ಏಳು ಸಾರಿ ನಿನ್ನನ್ನು ಸ್ತುತಿಸುತ್ತೇನೆ.

ಮಾರ್ಕ 1:35

ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು.

ಅಪೋಸ್ತಲರ ಕೃತ್ಯಗಳು 16:25

ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡಿದವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು. ಸೆರೆಯಲ್ಲಿದ್ದವರು ಅವುಗಳನ್ನು ಕೇಳುತ್ತಿದ್ದರು.

ರೋಮಾಪುರದವರಿಗೆ 7:12

ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ.

Interlinear

Choose Theme