ಓ ಕರ್ತನೇ, ನೀನು ಸವಿಾಪವೇ ಇದ್ದೀ; ನಿನ್ನ ಆಜ್ಞೆ ಗಳೆಲ್ಲಾ ಸತ್ಯವೇ.
Cross references
ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?
ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.
ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
ನಿನ್ನನ್ನು ಕೊಂಡಾಡುತ್ತೇವೆ; ಓ ದೇವರೇ, ನಿನ್ನನ್ನು ಕೊಂಡಾಡುತ್ತೇವೆ; ಪ್ರಕಟ ವಾಗುವ ನಿನ್ನ ಅದ್ಭುತ ಕಾರ್ಯಗಳಿಗೆ ನಿನ್ನ ನಾಮವು ಸವಿಾಪವಾಗಿದೆ.
ನಿನ್ನ ಸಾಕ್ಷಿ ಗಳನ್ನು ನೀತಿಯಾಗಿಯೂ ಬಹು ನಂಬಿಕೆಯುಳ್ಳವು ಗಳಾಗಿಯೂ ಆಜ್ಞಾಪಿಸಿದ್ದೀ.
ನಿನ್ನ ನೀತಿಯು ನಿತ್ಯವಾದ ನೀತಿಯೇ; ನಿನ್ನ ನ್ಯಾಯಪ್ರಮಾಣವು ಸತ್ಯವೇ.
ನಿನ್ನ ಸಾಕ್ಷಿಗಳ ನೀತಿ ನಿತ್ಯವಾದದ್ದು; ನನಗೆ ಗ್ರಹಿಕೆಯನ್ನು ಕೊಡು; ಆಗ ಬದುಕುವೆನು.
ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ;
ಕರ್ತನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.
ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.