Home Bibles ಕೀರ್ತನೆಗಳು 119:125 · ಕನ್ನಡ ಬೈಬಲ್
ಕೀರ್ತನೆಗಳು 119:125 · ಕನ್ನಡ ಬೈಬಲ್

ನಾನು ನಿನ್ನ ಸೇವಕನು; ನಿನ್ನ ಸಾಕ್ಷಿಗಳನ್ನು ತಿಳಿಯುವ ಹಾಗೆ ನನಗೆ ಗ್ರಹಿಕೆಯನ್ನು ಕೊಡು.

Cross references

2 ದಿನವೃತ್ತಾಂತ 1:7

ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು--ನಾನು ನಿನಗೆ ಕೊಡಬೇಕಾದದ್ದನ್ನು ಕೇಳಿಕೋ ಅಂದನು.

ಕೀರ್ತನೆಗಳು 86:16

ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.

ಕೀರ್ತನೆಗಳು 116:16

ಓ ಕರ್ತನೇ, ನಿಜವಾಗಿ ನಾನು ನಿನ್ನ ಸೇವಕನು. ಹೌದು, ನಾನು ನಿನ್ನ ಸೇವಕನು ನಿನ್ನ ದಾಸಿಯ ಮಗನು; ನೀನು ನನ್ನ ಬಂಧನಗಳನ್ನು ಬಿಚ್ಚಿದ್ದೀ.

ಕೀರ್ತನೆಗಳು 119:11

ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.

ಕೀರ್ತನೆಗಳು 119:18

ನನ್ನ ಕಣ್ಣುಗಳನ್ನು ತೆರೆ; ಆಗ ನಿನ್ನ ನ್ಯಾಯಪ್ರಮಾಣದಲ್ಲಿನ ಅದ್ಭುತಗಳನ್ನು ನೋಡುವೆನು.

ಕೀರ್ತನೆಗಳು 119:29

ಸುಳ್ಳು ಮಾರ್ಗವನ್ನು ನನ್ನಿಂದ ತೊಲ ಗಿಸು. ನಿನ್ನ ನ್ಯಾಯಪ್ರಮಾಣವನ್ನು ನನಗೆ ಕೃಪೆಯಿಂದ ಅನುಗ್ರಹಿಸು.

ಕೀರ್ತನೆಗಳು 119:34

ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.

ಕೀರ್ತನೆಗಳು 119:66

ಒಳ್ಳೆಯ ವಿವೇಚನೆ ಯನ್ನೂ ತಿಳುವಳಿಕೆಗಳನ್ನೂ ನನಗೆ ಕಲಿಸು; ನಿನ್ನ ಆಜ್ಞೆಗಳಲ್ಲಿ ನಂಬಿಕೆ ಇಟ್ಟಿದ್ದೇನೆ.

ಕೀರ್ತನೆಗಳು 119:94

ನಾನು ನಿನ್ನ ವನೇ, ನನ್ನನ್ನು ರಕ್ಷಿಸು; ನಿನ್ನ ಕಟ್ಟಳೆಗಳನ್ನು ಹುಡುಕಿ ದ್ದೇನೆ.

ಸಾಮೇತಿಗಳು 9:10

ಪರಿಶುದ್ಧರ ತಿಳುವಳಿಕೆಯೇ ವಿವೇಕವು.

ಸಾಮೇತಿಗಳು 14:8

ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ.

ರೋಮಾಪುರದವರಿಗೆ 6:22

ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧತೆಯೇ ನಿಮಗೆ ಫಲ; ಅದರ ಅಂತ್ಯವು ನಿತ್ಯಜೀವವೇ.ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.

2 ಕೊರಿಂಥದವರಿಗೆ 3:5

ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;

2 ತಿಮೋಥೆಯ 2:7

ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ.

ಯಾಕೋಬ 1:5

ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.

ಯಾಕೋಬ 3:13

ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ.

Interlinear

Choose Theme