ದುಷ್ಟನನ್ನು ಅವನ ಮೇಲೆ ನೇಮಿಸು; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.
Cross references
ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
ನಿನ್ನ ವಿರೋಧಿಯ ಸಂಗಡ ನೀನು ದಾರಿಯ ಲ್ಲಿರುವಾಗಲೇ ತ್ವರೆಯಾಗಿ ಅವನ ಕೂಡ ಒಂದಾಗು; ಇಲ್ಲವಾದರೆ ಯಾವ ಸಮಯದಲ್ಲಿಯಾದರೂ ಆ ವಿರೋಧಿಯು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ಮತ್ತು ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಾನು; ಆಗ ನೀನು ಸೆರೆಯಲ್ಲಿ ಹಾಕಲ್ಪಡುವಿ.
ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.
ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.
ರೊಟ್ಟಿಯ ತುಂಡನ್ನು ತಕ್ಕೊಂಡ ಮೇಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ--ನೀನು ಮಾಡುವ ದನ್ನು ಬೇಗನೆ ಮಾಡು ಎಂದು ಹೇಳಿದನು.