Home Bibles ☰ Books ಕೀರ್ತನೆಗಳು 107:39 · ಕನ್ನಡ ಬೈಬಲ್
ಕೀರ್ತನೆಗಳು 107:39 · ಕನ್ನಡ ಬೈಬಲ್

ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ.

Cross references

ಆದಿಕಾಂಡ 45:11

ಅಲ್ಲಿ ನಿನ್ನನ್ನು ಪೋಷಿಸುವೆನು. ಯಾಕಂದರೆ ಇನ್ನೂ ಕ್ಷಾಮದ ಐದು ವರುಷಗಳಿವೆ. ನಿನಗೂ ನಿನ್ನ ಮನೆಗೂ ನಿನಗಿರುವದೆಲ್ಲದಕ್ಕೂ ಬಡತನವಾಗಬಾರದು ಎಂದು ಹೇಳಿರಿ.

ನಿರ್ಗಮಕಾಂಡ 1:13

ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು.

ನಿರ್ಗಮಕಾಂಡ 2:23

ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್‌ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.

ನ್ಯಾಯಾಧಿಪತಿಗಳು 6:3

ಇಸ್ರಾಯೇಲ್ಯರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ ಅಮಾಲೇ ಕ್ಯರೂ ಮೂಡಣದ ಮಕ್ಕಳೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು

ರೂತ 1:20

ಆಗ ಆಕೆಯು ಅವರಿಗೆ ನನ್ನನ್ನು ನೊವೊಮಿ ಎಂದು ಕರೆಯಬೇಡಿರಿ; ಮಾರಾ ಎಂದು ಕರೆಯಿರಿ; ಯಾಕಂದರೆ ಸರ್ವಶಕ್ತನು ನನ್ನನ್ನು ಬಹು ದುಃಖದಲ್ಲಿ ನಡಿಸಿದನು.

1 ಸಮುವೇಲ 2:5

ತೃಪ್ತಿಪಟ್ಟವರು ರೊಟ್ಟಿಗೋಸ್ಕರ ಕೂಲಿ ಕೆಲಸಕ್ಕೆ ಹೋಗುತ್ತಾರೆ; ಹಸಿದವರು ತಿಂದು ತೃಪ್ತರಾದರು; ಬಂಜೆಯಾದವಳು ಏಳು ಮಂದಿ ಮಕ್ಕಳನ್ನು ಹೆತ್ತಳು, ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನ ಳಾದಳು.

2 ಅರಸುಗಳು 4:8

ಆ ಕಾಲದಲ್ಲಿ ಏನಾಯಿತಂದರೆ, ಎಲೀಷನು ಶೂನೇ ಮಿಗೆ ಹೋದನು. ಅಲ್ಲಿ ಘನವುಳ್ಳ ಒಬ್ಬ ಸ್ತ್ರೀಯು ಇದ್ದಳು. ಅವಳು ಅವನನ್ನು ರೊಟ್ಟಿ ತಿನ್ನಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗೆಲ್ಲಾ ಅಲ್ಲಿ ರೊಟ್ಟಿ ತಿನ್ನಲು ಹೋಗುತ್ತಿ ದ್ದನು.

2 ಅರಸುಗಳು 8:3

ಏಳು ವರುಷದ ತರುವಾಯ ಏನಾಯಿತಂದರೆ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರಿಗಿ ಬಂದು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಟ್ಟಳು.

2 ಅರಸುಗಳು 10:32

ಆ ದಿವಸಗಳಲ್ಲಿ ಕರ್ತನು ಇಸ್ರಾಯೇಲನ್ನು ಕಡಿಮೆ ಮಾಡಲು ಆರಂಭಿಸಿದನು. ಯಾಕಂದರೆ ಹಜಾಯೇ ಲನು ಇಸ್ರಾಯೇಲಿನ ಎಲ್ಲಾ ಮೇರೆಗಳಲ್ಲಿ ಅವರನ್ನು ಸಂಹರಿಸಿದನು.

2 ಅರಸುಗಳು 13:7

ಆದರೂ ಯೆಹೋವಾಹಾಜನಿಗೆ ಐವತ್ತು ಕುದುರೆ ರಾಹುತ ರನ್ನೂ ಹತ್ತು ರಥಗಳನ್ನೂ ಹತ್ತು ಸಾವಿರ ಕಾಲಾಳು ಗಳನ್ನೂ ಹೊರತು ಜನರಲ್ಲಿ ಏನೂ ಬಿಡಲಿಲ್ಲ. ಯಾಕಂದರೆ ಅರಾಮ್ಯರ ಅರಸನು ಅವರನ್ನು ಸಂಹ ರಿಸಿ ತುಳಿಯಲ್ಪಟ್ಟ ಧೂಳಿನ ಹಾಗೆ ಮಾಡಿದ್ದನು.

2 ಅರಸುಗಳು 13:22

ಯೆಹೋವಾಹಾಜನ ದಿವಸಗಳಲ್ಲೆಲ್ಲಾ ಅರಾ ಮ್ಯರ ಅರಸನಾದ ಹಜಾಯೇಲನು ಇಸ್ರಾಯೇಲನ್ನು ಬಾಧೆಪಡಿಸಿದನು.

2 ಅರಸುಗಳು 14:26

ಇಸ್ರಾಯೇಲಿನ ಶ್ರಮೆಯು ಬಹಳ ಕಠಿಣವಾಗಿದೆ ಎಂದು ಕರ್ತನು ಕಂಡನು. ಯಾಕಂದರೆ ಮುಚ್ಚಲ್ಪಟ್ಟವನಾದರೂ ಬಿಡಲ್ಪಟ್ಟವನಾದರೂ ಇಸ್ರಾ ಯೇಲಿಗೆ ಸಹಾಯಕನಾದರೂ ಯಾವನೂ ಇರಲಿಲ್ಲ.

2 ದಿನವೃತ್ತಾಂತ 15:5

ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು; ದೇಶದ ನಿವಾಸಿಗಳು ಬಹಳ ವಾಗಿ ಹೆದರಿದ್ದರು.

Interlinear

Choose Theme