ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
Cross references
ನಿನ್ನ ದೇವರಾದ ಕರ್ತನು ನಿನ್ನನ್ನು ಸೆರೆಯಿಂದ ಬಿಡಿಸಿ ನಿನ್ನ ಮೇಲೆ ಅಂತಃಕರಣಪಟ್ಟು ತಿರುಗಿಕೊಂಡು ನಿನ್ನನ್ನು ಚದುರಿಸಿದ ಎಲ್ಲಾ ಜನಾಂಗಗಳೊಳಗಿಂದ ನಿನ್ನನ್ನು ಕೂಡಿಸುವನು.
ನಮ್ಮ ರಕ್ಷಣೆಯ ದೇವರೇ, ನಾವು ನಿನ್ನ ಪರಿಶುದ್ಧ ಹೆಸ ರನ್ನು ಕೊಂಡಾಡಿ ನಿನ್ನ ಸ್ತೋತ್ರದಲ್ಲಿ ಹೆಚ್ಚಳ ಪಡುವ ಹಾಗೆ ನಮ್ಮನ್ನು ರಕ್ಷಿಸು; ಜನಾಂಗಗಳೊಳಗಿಂದ ನಮ್ಮನ್ನು ತೆಗೆದು ಕೂಡಿಸು.
ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.
ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು.
ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು.
ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಇಸ್ರಾಯೇಲನ ಮಕ್ಕಳನ್ನು ಅವರು ಹೋಗಿರುವ ಕಡೆಯಿಂದಲೂ ಅವರನ್ನು ಒಂದುಗೂಡಿಸಿ ಅವರನ್ನು ಅವರ ಸ್ವಂತ ದೇಶಕ್ಕೆ ತರುವೆನು.
ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈಗ ನಾನು ಯಾಕೋಬಿನ ಸೆರೆಯನ್ನು ತಿರಿಗಿ ತರುತ್ತೇನೆ, ಸಂಪೂರ್ಣ ಇಸ್ರಾಯೇಲಿನ ಮನೆತನದ ವರ ಮೇಲೆ ಕರುಣೆಯಿಡುತ್ತೆನೆ; ನನ್ನ ಪರಿಶುದ್ಧ ಹೆಸರಿಗಾಗಿ ಸ್ವಗೌರವುಳ್ಳವನಾಗಿರುವೆನು.
ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವ ದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ;
ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು.