ಅವರ ಮುಂದೆ ಒಬ್ಬ ಮನುಷ್ಯನನ್ನು ಅಂದರೆ ದಾಸನಾಗಿ ಮಾರಲ್ಪಟ್ಟ ಯೋಸೇಫನನ್ನು ಕಳುಹಿಸಿದನು.
Cross references
ಬನ್ನಿರಿ, ಇಷ್ಮಾಯೇಲ್ಯರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಯಾಕಂದರೆ ಅವನು ನಮ್ಮ ಸಹೋದರನೂ ನಮ್ಮ ಮಾಂಸವೂ ಆಗಿದ್ದಾನೆ ಅಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು.
ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.
ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
ಯೋಸೇಫನನ್ನು ಐಗುಪ್ತಕ್ಕೆ ತಕ್ಕೊಂಡು ಹೋದರು. ಅವನನ್ನು ಅಲ್ಲಿಗೆ ತಕ್ಕೊಂಡು ಹೋದ ಇಷ್ಮಾಯೇಲ್ಯರ ಕೈಯಿಂದ ಐಗುಪ್ತದವನೂ ಫರೋಹನ ಉದ್ಯೋಗಸ್ಥನೂ ಮೈಗಾವಲಿನವನೂ ಅಧಿಪತಿಯೂ ಆದ ಪೋಟೀಫರನು ಅವನನ್ನು ಕೊಂಡುಕೊಂಡನು.
ಆಗ ಯೋಸೇಫನು ತನ್ನ ಸಹೋದರರಿಗೆ--ನನ್ನ ಬಳಿಗೆ ಬನ್ನಿರಿ ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು--ನೀವು ಐಗುಪ್ತಕ್ಕೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ.
ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟು ಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.
ಆದದ ರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವ ದಕ್ಕೂ ದೊಡ್ಡ ಬಿಡುಗಡೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸುವದಕ್ಕೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾನೆ.
ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು ಈಗ ಮಾಡಿದ ಹಾಗೆ ಬಹುಜನರನ್ನು ಬದುಕಿಸುವದಕ್ಕೋಸ್ಕರ ಮೇಲಿಗಾಗಿ ಆಲೋಚನೆ ಮಾಡಿದನು.
ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫ ನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. ಆದರೆ ದೇವರು ಅವನ ಸಂಗಡ ಇದ್ದು