ಸಾಮೇತಿಗಳು 8:22 · ಕನ್ನಡ ಬೈಬಲ್
ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು.
Cross references
ಯೋಬ 28:26
ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
ಯೋಬ 28:27
ಆಗಲೇ ಅದನ್ನು ನೋಡಿ ಪ್ರಕಟಿಸಿದನು; ಆತನು ಅದನ್ನು ಸಿದ್ಧಮಾಡಿ ಹೌದು, ಪರಿಶೋಧಿಸಿದನು.ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
ಕೀರ್ತನೆಗಳು 104:24
ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.
ಸಾಮೇತಿಗಳು 3:19
ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು.
ಯೋಹಾನ 1:1
ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.
ಕೊಲೊಸ್ಸೆಯವರಿಗೆ 1:17
ಆತನು ಎಲ್ಲದಕ್ಕೂ ಮೊದಲು ಇದ್ದಾತನು; ಆತನು ಸಮಸ್ತಕ್ಕೂ ಆಧಾರನಾಗಿದ್ದಾನೆ.