Home Bibles ಸಾಮೇತಿಗಳು 6:34 · ಕನ್ನಡ ಬೈಬಲ್
ಸಾಮೇತಿಗಳು 6:34 · ಕನ್ನಡ ಬೈಬಲ್

ಮನುಷ್ಯನ ಕ್ರೋಧವು ಮತ್ಸರವಾಗಿದೆ; ಆದದರಿಂದ ಮುಯ್ಯಿ ತೀರಿಸುವ ದಿನದಲ್ಲಿ ಅವನು ಕ್ಷಮೆತೋರುವದಿಲ್ಲ.ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ.

Cross references

ಆದಿಕಾಂಡ 39:19

ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು.

ಅಂಕೆಗಳ ಪುಸ್ತಕ 5:14

ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ,

ಅಂಕೆಗಳ ಪುಸ್ತಕ 25:11

ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.

ನ್ಯಾಯಾಧಿಪತಿಗಳು 19:29

ಅವನು ತನ್ನ ಮನೆಗೆ ಹೋದಾಗ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡು ಗಳಾಗಿ ಕಡಿದು ಅವುಗಳನ್ನು ಇಸ್ರಾಯೇಲಿನ ಮೇರೆ ಗಳಿಗೆಲ್ಲಾ ಕಳುಹಿಸಿದನು.ಆಗ ಅದನ್ನು ನೋಡುವ ವರೆಲ್ಲಾ--ಇಸ್ರಾಯೇಲ್‌ ಮಕ್ಕಳು ಐಗುಪ್ತದಿಂದ ಬಂದ ದಿವಸ ಮೊದಲುಗೊಂಡು ಈ ಪರ್ಯಂತರ ಇಂಥಾ ಕಾರ್ಯವು ಆದದ್ದೂ ಇಲ್ಲ, ಕಾಣಲ್ಪಟ್ಟದ್ದೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು ಅಂದುಕೊಂಡರು.

2 ಸಮುವೇಲ 11:5

ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ ತಾನು ಗರ್ಭವತಿಯಾದೆನೆಂದು ದಾವೀದನಿಗೆ ಹೇಳಿ ಕಳುಹಿಸಿದಳು.

ಸಾಮೇತಿಗಳು 27:4

ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು?

ಪರಮಗೀತ 8:6

ನಿನ್ನ ಹೃದಯದ ಮೇಲೆ ಒಂದು ಮುದ್ರೆಯ ಹಾಗೆಯೂ ನಿನ್ನ ಕೈಮೇಲೆ ಒಂದು ಮುದ್ರೆಯ ಹಾಗೆಯೂ ನನ್ನನ್ನು ಹಾಕು; ಪ್ರೀತಿಯು ಮರಣದ ಹಾಗೆ ಬಲವಾಗಿರುವದು; ರೋಷವು ಸಮಾಧಿಯ ಹಾಗೆ ಕ್ರೂರವಾಗಿರುವದು; ಅದರ ಕಲ್ಲಿದ್ದಲುಗಳ ಬೆಂಕಿಯು ಪ್ರಜ್ವಲಿಸುವ ಜ್ವಾಲೆಯ ಕಿಡಿಗಳಾಗಿ ಇರುವವು.

1 ಕೊರಿಂಥದವರಿಗೆ 10:22

ಕರ್ತ ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?

Interlinear

Choose Theme