ನೀನು ಹೋಗು ವಾಗ ಅದು ನಿನ್ನನ್ನು ನಡಿಸುವದು; ಮಲಗುವಾಗ ನಿನ್ನನ್ನು ಕಾಯುವದು; ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು.
Cross references
ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು.
ಮನು ಷ್ಯರ ಕ್ರಿಯೆಗಳ ವಿಷಯವಾಗಿ ನಿನ್ನ ತುಟಿಗಳ ಮಾತಿ ನಿಂದ ನಾಶಮಾಡುವವನ ಹಾದಿಗಳಿಗೆ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು.
ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ.
ಯೌವನಸ್ಥನು ಯಾವದರಿಂದ ತನ್ನ ನಡತೆಯನ್ನು ಶುಚಿಮಾಡಿಕೊಳ್ಳುವನು? ನಿನ್ನ ವಾಕ್ಯವನ್ನು ಕೈಕೊಳ್ಳು ವದರಿಂದಲೇ.
ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
ನಿನ್ನ ಸಾಕ್ಷಿಗಳೇ ನನ್ನ ಆನಂದವೂ ಆಲೋಚನಾ ಕರ್ತರೂ ಆಗಿವೆ.
ನನ್ನ ಪ್ರವಾಸದ ಮನೆಯಲ್ಲಿ ನಿನ್ನ ನಿಯಮಗಳು ನನಗೆ ಕೀರ್ತನೆಗಳಾಗಿವೆ.
ನಿನ್ನ ನ್ಯಾಯಪ್ರಮಾಣವನ್ನು ನಾನು ಎಷ್ಟೋ ಪ್ರೀತಿ ಮಾಡುತ್ತೇನೆ, ದಿನವೆಲ್ಲಾ ಅದೇ ನನ್ನ ಧ್ಯಾನವು.
ನಾನು ನಿನ್ನ ವಾಕ್ಯದಲ್ಲಿ ಧ್ಯಾನ ಮಾಡುವ ಹಾಗೆ ನನ್ನ ಕಣ್ಣುಗಳು ರಾತ್ರಿ ಜಾವಗಳನ್ನು ಮುಂಗೊ ಂಡವೆ.
ವಿವೇಕವು ನಿನ್ನನ್ನು ಭದ್ರವಾಗಿ ಕಾಯುತ್ತದೆ; ತಿಳುವಳಿಕೆಯು ನಿನ್ನನ್ನು ಕಾಪಾಡುವದು;
ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ.
ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ ಆನೇಕರನ್ನು ವಶಪಡಿಸಿಕೊಳ್ಳುವನು; ಆದರೆ ಒಬ್ಬ ಅಧಿಪತಿಯು ತನಗಾಗಿ ಅವನ ನಿಂದೆಯನ್ನು ಅಡಗಿಸಿ ಬಿಡುವನು; ಆ ನಿಂದೆಯನ್ನು ತನ್ನ ಮೇಲೆ ಹಾಕಿಕೊಳ್ಳದೆ ಅವನ ಮೇಲೆ ತಿರುಗಿಸಿಬಿಡುವನು.