Home Bibles ಸಾಮೇತಿಗಳು 29:13 · ಕನ್ನಡ ಬೈಬಲ್
ಸಾಮೇತಿಗಳು 29:13 · ಕನ್ನಡ ಬೈಬಲ್

ಬಡವರೂ ಮೋಸಗಾರರೂ ಒಟ್ಟಾಗಿ ಸಂಧಿಸುತ್ತಾರೆ; ಕರ್ತನು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುತ್ತಾನೆ.

Cross references

ನಿರ್ಗಮಕಾಂಡ 22:25

ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ.

ಲೇವ್ಯಕಾಂಡ 25:35

ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.

ನೆಹೆಮ್ಯ 5:5

ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.

ಕೀರ್ತನೆಗಳು 13:3

ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ

ಸಾಮೇತಿಗಳು 22:2

ಧನಿಕರು, ಬಡವರು ಒಟ್ಟಾಗಿ ಸಂಧಿಸುತ್ತಾರೆ; ಅವರೆಲ್ಲರನ್ನು ಸೃಷ್ಟಿಸಿದಾತನು ಕರ್ತನೇ.

ಮತ್ತಾಯ 5:45

ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.

ಮತ್ತಾಯ 9:9

ತರುವಾಯ ಯೇಸು ಅಲ್ಲಿಂದ ಹಾದು ಹೋಗು ತ್ತಿದ್ದಾಗ ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವದನ್ನು ನೋಡಿ ಅವ ನಿಗೆ--ನನ್ನನ್ನು ಹಿಂಬಾಲಿಸು ಅನ್ನಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.

1 ಕೊರಿಂಥದವರಿಗೆ 6:10

ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.

ಎಫೆಸದವರಿಗೆ 2:1

ಇದಲ್ಲದೆ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಆತನು ಬದುಕಿಸಿದನು.

Interlinear

Choose Theme