Home Bibles ಸಾಮೇತಿಗಳು 27:2 · ಕನ್ನಡ ಬೈಬಲ್
ಸಾಮೇತಿಗಳು 27:2 · ಕನ್ನಡ ಬೈಬಲ್

ನಿನ್ನ ಸ್ವಂತ ಬಾಯಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.

Cross references

2 ಅರಸುಗಳು 10:16

ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.

ಸಾಮೇತಿಗಳು 20:6

ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?

ಸಾಮೇತಿಗಳು 25:27

ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವದು ಗೌರವವಲ್ಲ.ತನ್ನ ಸ್ವಂತ ಮನಸ್ಸನ್ನು ಆಳದಿರುವವನು ಮುರಿ ಯಲ್ಪಟ್ಟು ಬಿದ್ದುಹೋಗಿ, ಗೋಡೆಗಳಿಲ್ಲದ ಪಟ್ಟಣಕ್ಕೆ ಸಮಾನ.

2 ಕೊರಿಂಥದವರಿಗೆ 10:12

ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವದಕ್ಕಾಗಲಿ ಅವರಿಗೆ ಹೋಲಿಸಿ ಕೊಳ್ಳುವದಕ್ಕಾಗಲಿ ನಮಗೆ ಧೈರ್ಯ ಸಾಲದು; ಅವರಂತೂ ತಮ್ಮೊಳಗೆ ತಮ್ಮ ತಮ್ಮನ್ನು ಅಳತೆ ಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.

2 ಕೊರಿಂಥದವರಿಗೆ 10:18

ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.

2 ಕೊರಿಂಥದವರಿಗೆ 12:11

ನಾನು ಹೀಗೆ ಹೊಗಳಿಕೊಳ್ಳುವದರಲ್ಲಿ ಬುದ್ಧಿಹೀನ ನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಏನೂ ಅಲ್ಲದವನಾದರೂ ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ ಯಾವದರಲ್ಲಿಯೂ ನಾನು ಕಡಿಮೆಯಾದವನಲ್ಲ.

Interlinear

Choose Theme