ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ ಅದು ಶಾಪವೆಂದು ಎಣಿಸಲ್ಪಡುವದು.
Cross references
ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಲ ಬಳಿಯಲ್ಲಿ ನಿಂತುಕೊಂಡು ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯ ಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು--ನೀನು ಯಾವ ಪಟ್ಟಣದವನೆಂದು ಕೇಳು ವನು.
ಅರ್ಕೀಯನಾದ ಹೂಷೈ ಯೆಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದು--ಅರಸನು ಬಾಳಲಿ, ಅರಸನು ಬಾಳಲಿ ಅಂದನು.
ಆಗ ಹೂಷೈ ಅಬ್ಷಾಲೋಮ ನಿಗೆ--ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೇದಲ್ಲ.
ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
ಆದರೆ ವಿಾಕಾಯೆಹುನನ್ನು ಕರೆಯಲು ಹೋದ ದೂತನು ಅವನಿಗೆ--ಇಗೋ, ಪ್ರವಾದಿಗಳ ವಾಕ್ಯಗಳು ಒಂದೇ ಬಾಯಿಂದ ಅರಸನಿಗೆ ಒಳ್ಳೇದನ್ನೇ ಪ್ರಕಟಿಸುತ್ತವೆ; ನಿನ್ನ ವಾಕ್ಯವು ಅವರಲ್ಲಿರುವ ಒಬ್ಬನ ವಾಕ್ಯದ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.
ಪ್ರವಾದಿ ಯಾದ ಯೆರೆವಿಾಯನು ಸೆರೆಯಲ್ಲಿರುವ ಹಿರಿಯರ ಉಳಿದವರಿಗೂ ಯಾಜಕರಿಗೂ ಪ್ರವಾದಿಗಳಿಗೂ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬೆಲಿಗೆ ಒಯ್ದ ಜನರೆಲ್ಲರಿಗೆ
ಆಗ ಜನರು--ಇದು ಮನುಷ್ಯನ ಸ್ವರವಲ್ಲ , ದೇವರ ಸ್ವರವೇ ಎಂದು ಅರ್ಭಟಿಸಿದರು.