ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ಬರುವದು.
Cross references
ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.
ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ ಮಲಿನವನ್ನು ಸ್ವಚ್ಚವಾಗಿ ಶುದ್ಧಮಾಡಿ ನಿನ್ನ ಎಲ್ಲಾ ಕಲ್ಮಷವನ್ನು ತೆಗೆದು ಬಿಡುವೆನು.
ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ.
ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ.
ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಕೆಲವು ಗೌರವಕ್ಕೂ ಕೆಲವು ಅಗೌರವಕ್ಕೂ ಇರುತ್ತವೆ.
ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.