ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚುಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ;
Cross references
ಅವರು ದಿನ್ನೆಯನ್ನು ಹತ್ತಿ ಪಟ್ಟಣ ದೊಳಗೆ ಹೋಗುವಾಗ ನೀರು ಸೇದಲು ಬರುವ ಹುಡುಗಿಯರನ್ನು ನೋಡಿ -- ದರ್ಶಿಯು ಇಲ್ಲಿ ಇದ್ದಾನೋ? ಎಂದು ಅವರನ್ನು ಕೇಳಿದರು.
ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.
ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ; ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು ಅಂದರು.
ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ;
ದುಷ್ಟನು ನೀತಿವಂತನಿಗಾಗಿ ಹೊಂಚು ಹಾಕು ತ್ತಾನೆ. ಅವನನ್ನು ಕೊಲ್ಲಲು ಹುಡುಕುತ್ತಾನೆ.
ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.
ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.
ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
ಆದರೆ ಅವರು ಹೊಂಚುಹಾಕಿ ಕೊಂಡಿರುವದು ಸೌಲನಿಗೆ ತಿಳಿಯಬಂತು. ಅವನನ್ನು ಕೊಲ್ಲುವದಕ್ಕಾಗಿ ಅವರು ಹಗಲಿರುಳೂ ದ್ವಾರಗಳನ್ನು ಕಾಯುತ್ತಿದ್ದರು;
ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.
ಅವನನ್ನು ಕೊಲ್ಲುವದಕ್ಕಾಗಿ ದಾರಿಯಲ್ಲಿ ಹೊಂಚು ಹಾಕುತ್ತಾ ಅವನನ್ನು ಯೆರೂಸಲೇಮಿನಿಂದ ಕರೆಯಿಸ ಬೇಕೆಂದು ಅವನಿಗೆ ವಿರೋಧವಾಗಿ ಬೇಡಿಕೊಂಡರು.