ಮೂರ್ಖತನವು ಹುಡುಗನ ಹೃದಯದಲ್ಲಿ ಕಟ್ಟಲ್ಪಟ್ಟಿದೆ. ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವದು.
Cross references
ಅಪವಿತ್ರವಾದದ್ದರಿಂದ ಶುದ್ಧ ವಾದದ್ದನ್ನು ತರುವವನಾರು? ಒಬ್ಬನೂ ಇಲ್ಲ.
ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು.
ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ; ಮುಂಚಿತವಾಗಿ ಶಿಕ್ಷಿಸುವವನು ಅವನನ್ನು ಪ್ರೀತಿಸುತ್ತಾನೆ.ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಅಳುವಿಕೆಗೆ ನೀನು ಕನಿಕರಿಸದೆ ಇರು.
ಹುಡು ಗನ ಶಿಕ್ಷೆಗೆ ಹಿಂತೆಗೆಯಬೇಡ; ಅವನನ್ನು ಬೆತ್ತದಿಂದ ಹೊಡೆದರೆ ಅವನು ಸಾಯುವದಿಲ್ಲ.
ಅವನನ್ನು ಬೆತ್ತದಿಂದ ಹೊಡೆದು ಪಾತಾಳದಿಂದ ಅವನ ಆತ್ಮವನ್ನು ತಪ್ಪಿಸುವಿ;
ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು.
ಶರೀರದಿಂದ ಹುಟ್ಟಿದ್ದು ಶರೀ ರವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ.
ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.
ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ.