Home Bibles ಸಾಮೇತಿಗಳು 21:14 · ಕನ್ನಡ ಬೈಬಲ್
ಸಾಮೇತಿಗಳು 21:14 · ಕನ್ನಡ ಬೈಬಲ್

ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ.

Cross references

ಆದಿಕಾಂಡ 32:20

ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು.

ಆದಿಕಾಂಡ 43:11

ಆಗ ಅವರ ತಂದೆಯಾದ ಇಸ್ರಾಯೇಲನು ಅವರಿಗೆ--ನೀವು ಹೀಗೆ ಮಾಡಿರಿ, ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮ ಸಾಮಾನು ಗಳಲ್ಲಿ ಇಟ್ಟುಕೊಂಡು ಆ ಮನುಷ್ಯನಿಗೆ ಕಾಣಿಕೆ ಯಾಗಿ ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಅಕ್ರೋಡು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ.

1 ಸಮುವೇಲ 25:35

ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು.

ಸಾಮೇತಿಗಳು 17:8

ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ.

ಸಾಮೇತಿಗಳು 17:23

ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.

ಸಾಮೇತಿಗಳು 18:16

ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರಕೊಂಡು ಹೋಗುತ್ತದೆ.

ಸಾಮೇತಿಗಳು 19:6

ಅಧಿಪ ತಿಯ ದಯೆಗಾಗಿ ಅನೇಕರು ಬಿನ್ನವಿಸುವರು; ದಾನಗ ಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.

ಮತ್ತಾಯ 6:3

ಆದರೆ ನೀನು ದಾನಮಾಡುವಾಗ ನಿನ್ನ ಬಲಗೈ ಮಾಡುವದು ನಿನ್ನ ಎಡಗೈಗೆ ತಿಳಿಯದಿರಲಿ.

Interlinear

Choose Theme