Home Bibles ಸಾಮೇತಿಗಳು 20:9 · ಕನ್ನಡ ಬೈಬಲ್
ಸಾಮೇತಿಗಳು 20:9 · ಕನ್ನಡ ಬೈಬಲ್

ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು?

Cross references

1 ಅರಸುಗಳು 8:46

ಪಾಪವನ್ನು ಮಾಡದವನು ಯಾವನೂ ಇಲ್ಲದ್ದ ರಿಂದ ಅವರು ನಿನಗೆ ವಿರೋಧವಾಗಿ ಪಾಪ ಮಾಡಲು ನೀನು ಅವರ ಮೇಲೆ ಕೋಪಿಸಿಕೊಂಡು ದೂರವಾ ದರೂ ಸವಿಾಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆಯಾಗಿ ಒಯ್ಯಲ್ಪಡುವ ಹಾಗೆ ನೀನು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿದರೆ

2 ದಿನವೃತ್ತಾಂತ 6:36

ಪಾಪಮಾಡದವನು ಯಾವನೂ ಇಲ್ಲದ್ದರಿಂದ ಅವರು ನಿನಗೆ ವಿರೋಧವಾಗಿ ಪಾಪಮಾಡಲು ನೀನು ಅವರ ಮೇಲೆ ಕೋಪಿಸಿಕೊಂಡು ದೂರವಾದರೂ ಸವಿಾಪವಾದರೂ ಶತ್ರುವಿನ ದೇಶಕ್ಕೆ ಅವರು ಸೆರೆ ಯಾಗಿ ಒಯ್ಯಲ್ಪಡುವ ಹಾಗೆ

ಯೋಬ 14:4

ಅಪವಿತ್ರವಾದದ್ದರಿಂದ ಶುದ್ಧ ವಾದದ್ದನ್ನು ತರುವವನಾರು? ಒಬ್ಬನೂ ಇಲ್ಲ.

ಯೋಬ 15:14

ನಿರ್ಮಲನಾಗುವ ಹಾಗೆ ಮನುಷ್ಯನು ಎಷ್ಟರವನು? ನೀತಿವಂತನಾಗಿರುವ ಹಾಗೆ ಸ್ತ್ರೀಯಿಂದ ಹುಟ್ಟಿದವನು ಯಾರು?

ಯೋಬ 25:4

ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ?

ಕೀರ್ತನೆಗಳು 51:5

ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು.

ಸಭಾಪ್ರಸಂಗಿ 7:20

ಪಾಪ ಮಾಡದೆ ಒಳ್ಳೇದನ್ನೇ ನಡಿಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ.

1 ಕೊರಿಂಥದವರಿಗೆ 4:4

ನಾನೇ ನಾನಾಗಿ ಏನೂ ತಿಳಿಯದವನಾಗಿದ್ದೇನೆ; ಆದಾಗ್ಯೂ ಅದರಿಂದ ನಾನು ನೀತಿವಂತನಾಗಲಿಲ್ಲ; ನನ್ನನ್ನು ವಿಚಾರಿಸುವಾತನು ಕರ್ತನೇ.

ಯಾಕೋಬ 3:2

ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.

1 ಯೋಹಾನ 1:8

ನಮ್ಮಲ್ಲಿ ಪಾಪವಿಲ್ಲ ವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸ ಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ.

Interlinear

Choose Theme