Home Bibles ಸಾಮೇತಿಗಳು 17:6 · ಕನ್ನಡ ಬೈಬಲ್
ಸಾಮೇತಿಗಳು 17:6 · ಕನ್ನಡ ಬೈಬಲ್

ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆ ಗಳೇ.

Cross references

ಆದಿಕಾಂಡ 50:23

ಯೋಸೇಫನು ಎಫ್ರಾಯಾಮಿನ ಮರಿ ಮೊಮ್ಮಕ್ಕ ಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀ ರನ ಮಕ್ಕಳು ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.

ನಿರ್ಗಮಕಾಂಡ 3:14

ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕು ಅಂದನು.

1 ಅರಸುಗಳು 11:12

ಆದರೆ ನಿನ್ನ ತಂದೆಯಾದ ದಾವೀದನಿಗೋಸ್ಕರ ನಿನ್ನ ಕಾಲ ದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಕೊಳ್ಳುವೆನು.

1 ಅರಸುಗಳು 15:4

ಅವನ ತರುವಾಯ ಅವನ ಮಗನನ್ನು ನೇಮಿಸುವದಕ್ಕೂ ಯೆರೂಸಲೇಮನ್ನು ಸ್ಥಿರಪಡಿಸುವದಕ್ಕೂ ತನ್ನ ದೇವರಾದ ಕರ್ತನು ದಾವೀದನ ನಿಮಿತ್ತ ಯೆರೂ ಸಲೇಮಿನಲ್ಲಿ ಅವನಿಗೆ ದೀಪವನ್ನು ಕೊಟ್ಟನು.

ಯೋಬ 42:16

ತರುವಾಯ ಯೋಬನು ನೂರ ನಾಲ್ವತ್ತು ವರುಷ ಬದುಕಿ ಮಕ್ಕಳನ್ನೂ ಮಕ್ಕಳ ಮಕ್ಕಳನ್ನೂ ನಾಲ್ಕನೇ ತಲಾಂತರದ ವರೆಗೆ ನೋಡಿದನು.ಯೋಬನು ಮುದುಕನಾಗಿಯೂ ದಿನ ತುಂಬಿದವನಾಗಿಯೂ ಸತ್ತನು.

ಕೀರ್ತನೆಗಳು 127:3

ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.

ಕೀರ್ತನೆಗಳು 128:3

ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು.

ಸಾಮೇತಿಗಳು 13:22

ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು; ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ.

ಸಾಮೇತಿಗಳು 16:31

ನೀತಿಯ ಮಾರ್ಗದಲ್ಲಿ ಕಾಣಿಸಲ್ಪಟ್ಟರೆ ನರೆತಲೆಯು ಸುಂದರ ಕಿರೀಟವಾಗಿವೆ.

Interlinear

Choose Theme