ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
Cross references
ಆಗ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ--ನಿಮ್ಮ ಸಹೋದರರು ಯುದ್ಧಕ್ಕೆ ಹೋಗ ಲಾಗಿ ನೀವು ಇಲ್ಲಿ ಕೂತಿರಬೇಕೋ?
ಈ ಕಾರ್ಯವು ಮೊರ್ದೆ ಕೈಯಿಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು; ಎಸ್ತೇರಳು ಮೊರ್ದೆ ಕೈಯಿಯ ಹೆಸರಿನಲ್ಲಿ ಅದನ್ನು ಅರಸನಿಗೆ ತಿಳಿಸಿದಳು.ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು. ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು.
ಆದರೆ ನನ್ನಲ್ಲಿ ವಿಶ್ವಾಸವಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವ ನಾದರೂ ಅಭ್ಯಂತರವಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತು ಹಾಕಿ ಅವನನ್ನು ಸಮುದ್ರದ ಆಳದಲ್ಲಿ ಮುಳುಗಿಸಿಬಿಡುವದು ಅವನಿಗೆ ಒಳ್ಳೇದು.
ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.
ಆದದರಿಂದ ನಾವು ಸಮಾಧಾನವನ್ನುಂಟು ಮಾಡುವವುಗಳನೂ ಪರಸ್ಪರ ಭಕ್ತಿವೃದ್ಧಿಯನ್ನುಂಟು ಮಾಡುವವುಗಳನ್ನೂ ಅನುಸರಿಸೋಣ.
ಆದದರಿಂದ ಬಲವುಳ್ಳವರಾದ ನಾವು ನಮ್ಮನ್ನೇ ಸಂತೋಷಪಡಿಸಿಕೊಳ್ಳದೆ ದುರ್ಬಲರ ಬಲಹೀನತೆಗಳನ್ನು ಸಹಿಸಿಕೊಳ್ಳತಕ್ಕದ್ದು.
ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ.
ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ.
ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
ಹೌದು, ಶರೀರದ ಅಂಗಗಳು ಬಹಳ ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ.
ಪ್ರೀತಿ ಬಹು ತಾಳ್ಮೆಯುಳ್ಳದ್ದು, ಕರುಣೆಯುಳ್ಳದ್ದು; ಪ್ರೀತಿಯು ಹೊಟ್ಟೇಕಿಚ್ಚು ಪಡುವದಿಲ್ಲ, ಹೊಗಳಿ ಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ,
ಸೇವೆಯು ದೂಷಿಸಲ್ಪಡದಂತೆ ಯಾವ ವಿಷಯ ದಲ್ಲಿಯೂ ನಿಂದೆಗೆ ಅವಕಾಶ ಕೊಡಬೇಡಿರಿ;
ಯಾರಾದರೂ ಬಲವಿಲ್ಲದವನಾದರೆ ನಾನು ಬಲವಿಲ್ಲದವನಾಗದೆ ಇರುವೆನೋ? ಯಾರಾದರೂ ಮುಗ್ಗರಿಸಿದರೆ ನಾನು ತಾಪಪಡದೆ ಇರುವೆನೋ?
ಆದರೂ ಬರಹದ ಪ್ರಕಾರ--ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸ ಬೇಕೆಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಒಳ್ಳೇದನ್ನು ಮಾಡುವವರಾಗಿರುವಿರಿ.