ತರುವಾಯ ಲೇವಿಯರು ಸಭೆಯ ಗುಡಾರದಲ್ಲಿ ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ಅವರ ಸೇವೆ ಮಾಡು ವದಕ್ಕೆ ಒಳಗೆ ಪ್ರವೇಶಿಸಿದರು. ಕರ್ತನು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಅವರಿಗೆ ಮಾಡಿದನು.
Cross references
ಕರ್ತನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳೆಲ್ಲಾ ಮಾಡಿದರು.ಅದೇ ದಿನದಲ್ಲಿ ಕರ್ತನು ಇಸ್ರಾಯೇಲ್ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೇಶದೊಳಗಿಂದ ಹೊರಗೆ ತಂದನು.
ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು.
ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು.
ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.
ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.