ಆರೋನನ ಸಂಗಡ ಮಾತನಾಡಿ ಅವನಿಗೆ ಹೇಳಬೇಕಾದದ್ದೇನಂದರೆ-- ನೀನು ದೀಪಗಳನ್ನು ಹಚ್ಚುವಾಗ ದೀಪಸ್ತಂಭಕ್ಕೆದುರಾಗಿ ಆ ಏಳು ದೀಪಗಳು ಪ್ರಕಾಶಿಸಬೇಕು.
Cross references
ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು.
ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು.
ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು.
ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಕರ್ತನ ಸನ್ನಿಧಿಯಲ್ಲಿ ದೀಪಗಳನ್ನು ಹತ್ತಿಸಿದನು.
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ದೀಪಗಳು ಶುದ್ಧವಾದ ದೀಪಸ್ತಂಭದ ಮೇಲೆ ಕರ್ತನ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.
ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
ನಿನ್ನ ವಾಕ್ಯಗಳ ಪ್ರವೇಶವು ಬೆಳಕನ್ನು ಕೊಟ್ಟು ಮೂರ್ಖರಿಗೆ ಗ್ರಹಿಕೆಯನ್ನು ಉಂಟುಮಾಡುತ್ತದೆ.
ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಹೇಳದಿರು ವದು ಅವರಲ್ಲಿ ಬೆಳಕಿಲ್ಲದ್ದರಿಂದಲೇ.
ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು.
ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು.
ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು.
ನನ್ನ ಸಂಗಡ ಮಾತ ನಾಡುತ್ತಿದ್ದ ಶಬ್ದವನ್ನು ನೋಡುವದಕ್ಕಾಗಿ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಚಿನ್ನದ ಏಳು ದೀಪಸ್ತಂಭ ಗಳನ್ನು ನಾನು ನೋಡಿದೆನು.
ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಆ ಏಳು ನಕ್ಷತ್ರಗಳು ಆ ಏಳು ಸಭೆಗಳ ದೂತರು; ನೀನು ಕಂಡ ಆ ಏಳು ದೀಪಸ್ತಂಭಗಳು ಆ ಏಳು ಸಭೆಗಳು ಎಂದು ಹೇಳಿದನು.
ಸಿಂಹಾಸನದೊಳಗಿಂದ ಮಿಂಚುಗಳೂ ಗುಡುಗುಗಳೂ ಶಬ್ದಗಳೂ ಹೊರಟವು; ಅದರ ಮುಂದೆ ದೇವರ ಏಳು ಆತ್ಮಗಳಾಗಿರುವ ಏಳು ಬೆಂಕಿಯ ದೀಪಗಳು ಉರಿಯುತ್ತಿದ್ದವು.